ಮಹಾ ಪ್ರತಿಭಟನೆಗೆ ಸಿದ್ದತೆ…

0
42

ಮಂಡ್ಯ/ಮಳವಳ್ಳಿ: ರೈತ ಉಳಿಗಾಗಿ 204 ಕ್ಕೂ ರೈತ ಸಂಘ ಹಾಗೂ ರಾಜ್ಯದ ಎಲ್ಲಾ ಕೃಷಿ ಕೂಲಿಕಾರರ ಸಂಘಗಳ ವತಿಯಿಂದ ಇದೇ ನವೆಂಬರ್ 29ಮತ್ತು 30 ರಂದು ದೆಹಲಿಯಲ್ಲಿ ಮಹಾ ಪ್ರತಿಭಟನೆ ನಡೆಯಲಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಜಿ.ಎನ್ ನಾಗರಾಜು ತಿಳಿಸಿದರು . ಮಳವಳ್ಳಿಪಟ್ಟಣದ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ 4 ದಿಕ್ಕುಗಳಿಂದ ದೆಹಲಿ ಗೆ ಆಗಮಿಸಿ ಅಲ್ಲಿಂದ ಪಾದಯಾತ್ರೆಯ ಮೂಲಕ ರೈತರ ಕೂಗನ್ನು ಸಾರುತ್ತಾ ಎರಡು ದಿನಗಳ ಮಹಾ ಪ್ರತಿಭಟನೆ ನಡೆಸುತ್ತಿದ್ದು, ನ. 30 ರಂದು ದೆಹಲಿಯ ಪಾರ್ಲಿಮೆಂಟ್ ನನ್ನು ಮುತ್ತಿಗೆ ಹಾಕಲಾಗುವುದು , ಎಂದರು ದೇಶದಲ್ಲಿ ರೈತ ಸಮಸ್ಯೆಗಳು ಸಾಕಷ್ಟು ಇದ್ದರೂ ಅವರ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಳ್ಳುತಿಲ್ಲ ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಸಮಸ್ಯೆ ಮತ್ತಷ್ಟು ಬಿಗಿಯಾಡಿಸಿದೆ ಎಂದು ಆರೋಪಿಸಿದರು. ರೈತರಿಗಾಗಿ ದೇಶ ಎನ್ನುವ ರೀತಿ ನಾವು ತೆಗೆದುಕೊಂಡು ಹೋಗಬೇಕಾಗಿದ್ದು , ಅದಕ್ಕಾಗಿ ಪತ್ರಕರ್ತರು, ರೈತರು, ಸಾಹಿತಿಗಳು, ಸೇರಿದಂತೆ ಅನೇಕ ಹೋರಾಟಗಾರು ಬೆಂಬಲ ನೀಡಬೇಕು. ಎಂದರು. ಕೆಆರ್ ಎಸ್ ಅಣೆಕಟ್ಟುಗೆ ಹಾನಿಯಾಗುವ ರೀತಿ ಗಣಿ ನಡೆಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಕೂಡಲೇ ನಿಲ್ಲಿಸಬೇಕು ಎಂದರು. ಗೋಷ್ಠಿಯಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟುಮಾಧು, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ , ಹನುಮೇಶ, ಶಿವಕುಮಾರ್ ಇದ್ದರು

LEAVE A REPLY

Please enter your comment!
Please enter your name here