ಮಹಾ ಶಿವರಾತ್ರಿ ಮಹೋತ್ಸವ

0
107

ಬೆಂಗಳೂರು ನಗರ/ಕೆ.ಆರ್.ಪುರ:- ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ವಿವದೆಡೆ ಶಿವನಿಗೆ ವಿಶೇಷ ಪೂಜೆಗಳು ನೇರವೇರಿದ್ದು, ಕೆ.ಆರ್.ಪುರ ಕ್ಷೇತ್ರದ ಹೊರಮಾವು ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಕಾಶೀಶ್ವರ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ಹಾಗೂ 51 ದೇವರುಗಳ ಉತ್ಸವ ಮಾಡುವ ಮೂಲಕ ಅದ್ದೂರಿ ಆಚರಿಸಲಾಯಿತು.

ವಿವಿಧ ರೀತಿಯ ಲಿಂಗಗಳು, ವೆಂಕಟೇಶ್ವರ ಸ್ವಾಮಿ, ಯಲ್ಲಮ್ಮ, ಅಣ್ಣಮ್ಮ, ಗಂಗಮ್ಮ ದೇವರುಗಳು ಸೇರಿದಂತೆ 51 ದೇವರುಗಳ ಉತ್ಸವ ನಡೆಸುವ ಮೂಲಕ ವಿಶೇಷವಾಗಿ ಶಿವರಾತ್ರಿ ಯನ್ನು ಆಚರಿಸಿದ್ದು ಹೊರಮಾವಿನ ಕಾಶೀಶ್ವರ ದೇವಾಲಯದಲ್ಲಿ ಇತಿಹಾಸ ಪ್ರಸಿದ್ಧ ದೇವಲಯ ಇಷ್ಟಾರ್ಥ ನೇರವೇರಿಸುವ ಕ್ಷೇತ್ರದ ವಾಗಿದೆ.

ಬೈಟ್:ವೇಣು, ಅರ್ಚಕರು.

ಶಿವರಾತ್ರಿ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಪುಣ್ಯಾಹ, ನವಗ್ರಹ ಪೂಜೆ, ನವಗ್ರಹ ಹೋಮ, ಗಣಪತಿ ಪೂಜೆ, ಗಣಪತಿ ಹೋಮ, ಹಾಗೂ 21 ಕಳಶ ಪ್ರತಿಷ್ಠಾಪನೆ ಮೂಲಕ ಪೂಜೆ ಸಲ್ಲಿಸಿ‌ ಪುಷ್ಪಾರ್ಚನೆ , ಸೂರ್ಯೋದಯ ಪೂಜೆ, ‌ಶಿವರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ನೈವೇದ್ಯ, 10.35 ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.ಇತಿಹಾಸ ಪ್ರಸಿದ್ದ ದೇವಾಲಕ್ಕೆ ಹೊರಮಾವು ಗ್ರಾಮದ ಸುತ್ತಮುತ್ತಲಿನ ಕಲ್ಕೆರೆ, ರಾಮಮೂರ್ತಿನಗರ, ಜಯಂತಿನಗರ, ಅಕ್ಷಯನಗರ, ಬಂಜಾರು ಲೇಔಟ್, ಕನಕನಗರ, ಚನ್ನಸಂದ್ರ, ಕಲ್ಯಾಣನಗರ, ಬಾಣಸವಾಡಿ, ಹೆಣ್ಣೂರು ಸೇರಿದಂತೆ ೧೫೦ ಊರುಗಳಿಂದ ನೂರಾರು ಮಂದಿ ಭಕ್ತರು ದೇವರುಗಳ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತಾನಾಡಿದ ದೇವಲಯದ ಉಸ್ತುವಾರಿ ಪ್ರತಾಪ್ ಅವರು ಕಾಶೀಶ್ವರ ದೇವಾಲಯಕ್ಕೆ ವಿಶೇಷ ಸ್ಥಾನವಿದ್ದು ಇಷ್ಟಾರ್ಥಗಳ ಇಡೇರಿಸುವ ಕ್ಷೇತ್ರವಾಗಿದೆ ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರತಿವರ್ಷ ವಿಭಿನ್ನ ವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಬೈಟ್: ಪ್ರತಾಪ್, ದೇವಲಯದ ಉಸ್ತುವಾರಿ.

ಒಟ್ಟಾರೆ ಶಿವರಾತ್ರಿಯಂದು ವಿಜೃಂಭಣೆ ಆಚರಣೆಯೊಂದಿಗೆ ೫೧ದೇವರುಗಳ ದರ್ಶನ ಭಕ್ತರಿಗೆ ಸಂತಸ ತಂದಿದೆ.

LEAVE A REPLY

Please enter your comment!
Please enter your name here