ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯ ಆರೋಪ..!?

0
228

ಅಧ್ಯಕ್ಷನಾಗುವ ಹುಂಬುತನದಿಂದ ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯ
ಆರೋಪ

ಬಳ್ಳಾರಿ /ಹೊಸಪೇಟೆ: ಸರಕಾರಿ ಆದೇಶಗಳನ್ನು ಪಾಲಿಸುತ್ತಿರುವ ನನಗೆ ಅನೇಕಬಾರಿ ವಿನಾಃಕಾರಣ ಮಾನಸಿಕವಾಗಿ ಕಿರಿಕಿರಿ ನೀಡುತ್ತಿದ್ದ ಹಿರಿಯ ನಗರಸಭೆ ಸದಸ್ಯ ಟಿ.ಚಿದಾನಂದ ಗುರುವಾರ ಸಂಜೆ ೬.೩೦ಕ್ಕೆ ನಗರಸಭೆ ಆವರಣದಲ್ಲಿಯೆ ಬಹಿರಂಗವಾಗಿ ನನಗೆ ಏಕವಚನದಿಂದ ಗದರಿಸಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು  ನಗರಸಭೆ ಪರಿಸರ ಅಭಿಯಂತರೆ ಶಿಲ್ಪಶ್ರೀ ದೂರಿದರು.

ನಗರಸಭೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಟಿಕ್ ನಿಷೇಧ ಕುರಿತು ಜಿಲ್ಲಾಧಿಕಾರಿ ಹಾಗೂ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವ ನನಗೆ ನಗರಸಭೆಯ ಹಿರಿಯ ಸದಸ್ಯ ಟಿ.ಚಿದಾನಂದ ಸುಲಲಿತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ನಗರಸಭೆಯ ಅಧ್ಯಕ್ಷರೊಂದಿಗೆ ತಿರುಗಾಡುತ್ತೀಯ, ಅವರೆಷ್ಟು ದಿನ ಅಧ್ಯಕ್ಷರಾಗಿರುತ್ತಾರೆ. ಇನ್ಮುಂದೆ ನಾನೇ ನಗರಸಭೆ ಅಧ್ಯಕ್ಷನಾಗುತ್ತೇನೆ. ಆಗ ನಿಮ್ಮನ್ನು ಹೇಗೆ ಇಡಬೇಕೆನ್ನುವುದು ನನಗೆ ಗೊತ್ತಿದೆ ಎಂದು ಅಸಭ್ಯವಾಗಿ ಗದರಿಸುತ್ತಾರೆ. ನಗರಸಭೆ ಅಧ್ಯಕ್ಷರ ಜೊತೆ ಅನೇಕ ಪರಿಸರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಸದಸ್ಯ ಚಿದಾನಂದನವರು ಅಪಾರ್ಥವಾಗಿ ಭಾವಿಸುತ್ತಾರೆ. ನಾನು ನನ್ನ ಕೆಲಸಗಳನ್ನು ನಿಯಮಬದ್ದವಾಗಿ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿದ್ದೇನೆ. ಹಿರಿಯ ಸದಸ್ಯರಾಗಿರುವ ಅವರು ನನಗೆ ಮಾರ್ಗದರ್ಶನ ಮಾಡುವ ಬದಲು ನನ್ನನ್ನೆ ಏಕೆ ಟಾರ್ಗೆಟ್ ಮಾಡುತ್ತಾರೆ ಎಂಬುದೆ ತಿಳಿಯುತ್ತಿಲ್ಲ. ನನ್ನ ತಂದೆ ತಾಯಿಗಳು ಸಹ ನನಗೆ ಎಂದೂ ಹಿಂಸೆಯಾಗುವ ಮಾತುಗಳನ್ನಾಡಿಲ್ಲ. ಈಗೆ ಇವರು ಮುಂದುವರಿಸಿದರೆ ನನಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಕೆಲಸಕ್ಕೆ ಸಹಕಾರ ನೀಡದೇ ಕಿರಿ ಕಿರಿ ಮಾಡುವುದನ್ನ  ಮುಂದುವರೆದರೆ ಬೇರೆಡೆಗೆ ವರ್ಗಾವಣೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಕೋರುತ್ತೇನೆ. ಈ ವಿಷಯವನ್ನು ಸಹಾಯಕ ಆಯುಕ್ತರ ಗಮನಕ್ಕೆ ತಂದಿದ್ದೇನೆ. ನನ್ನ ತಂದೆ ತಾಯಿಗೆ ಹೇಗೋ ವಿಷಯ ಗೊತ್ತಾಗಿದ್ದು ಅವರು ಸದಸ್ಯನ ವಿರುದ್ದ ದೂರು ನೀಡುವ ಸಾಧ್ಯತೆ ಇದೆ ಎಂದರು.

ಈ ಹಿಂದೆ ನಗರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಯೊಂದಕ್ಕೆ ಪತ್ರಕರ್ತರೊಬ್ಬರ ಮೇಲೆ ನಗರಸಭೆ ಸದಸ್ಯ ಟಿ.ಚಿದಾನಂದ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಘಟನೆ ಕುರಿತಂತೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದರ ಬೆನ್ನಲ್ಲೆ ಮೀಟರ್ ಬಡ್ಡಿ ದಂಧೆಯ ಪ್ರಕರಣಕ್ಕೆ ಸಬಂಧಪಟ್ಟಂತೆ ಆತನ ವಿರುದ್ದ ಮಹಿಳೆಯೊಬ್ಬರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿ, ಸದಸ್ಯನ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ನಗರಸಭೆ ಪರಿಸರ ಅಭಿಯಂತರೆ ಶಿಲ್ಪಶ್ರೀಯ ಅವರ ಮೇಲೆ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ.

LEAVE A REPLY

Please enter your comment!
Please enter your name here