ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ..

0
159

ಚಾಮರಾಜನಗರ/ಕೊಳ್ಳೇಗಾಲ:ಎಸ್.ಇ.ಪಿ. ಯೋಜನೆಯಡಿ ನಿರುದ್ಯೋಗ 3 ಜನ ವಿಧವೆ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು ರವರು ವಿತರಣೆ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಎಸ್.ಇ.ಪಿ. ಯೋಜನೆಯಡ್ಡಿ ಬಂಡಳ್ಳಿ ಗ್ರಾಮದ ಕಾವ್ಯ,ಚನ್ನಾಜಮ್ಮ ಹಾಗೂ ಕಾಮಗೆರೆ ಗ್ರಾಮದ ಯಶೋಧ ಎಂಬ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಿದರು.

ಸರ್ಕಾರ ಮಹಿಳೆಯರಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಲು ಮಹಿಳೆಯರು ಮುಂದೆ ಬರಬೇಕಾಗಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್,ಸದಸ್ಯ ರಾಜೇಂದ್ರ, ಮಾಜಿ ಅಧ್ಯಕ್ಷ ಬಸವರಾಜು, ವ್ಯವಸ್ಥಾಪಕ ಕೃಷ್ಣರಾಜೇ ಅರಸ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here