ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸಬಲೀಕರಣದ ಅಗತ್ಯವಿದೆ

0
202
Online News TV Channel
Online News TV Channel

ಕೋಲಾರ/ ಶ್ರೀನಿವಾಸಪುರ: ಮಹಿಳೆಯರು ಸಬಲೀಕರಣವಾಗಬೇಕು, ಶಿಕ್ಷಣದಲ್ಲಿ ಉನ್ನತವಾಗಿ ಬೆಳೆದು ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿಯನ್ನು ತರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಮೋಹನ್‍ಬಾಬುರವರು ಹೇಳಿದರು. ಶ್ರೀನಿವಾಸಪುರ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಶ್ರೀನಿವಾಸಪುರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಶು ಅಭಿವೃದ್ಧಿ ಯೋಜನೆ ಶ್ರೀನಿವಾಸಪುರ ರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಹಾಗೂ ಬಾಲ್ಯ ವಿವಾಹ ನಿಷೇದ ಜಾಗೃತಿ ಕಾರ್ಯಾಗಾರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೋಷಕರು ಹೆಣ್ಣು ಮಕ್ಕಳಿಗೆ ಉತ್ತಮವಾದ ಉಡುಪು ನೀಡಬೇಕು, ವಿಧ್ಯಾರ್ಥಿಗಳು ಶಾಲೆಗೆ ಹೋಗಿ ಬರುವಾಗ ಜಾಗ್ರತೆಯಿಂದ ಇರಬೇಕು ಮತ್ತು ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲೇ ಇದೆಯೆಂಬುದನ್ನು ಯಾವತ್ತಿಗೂ ಮರೆಯಬಾರದು. ಉಡುಪನ್ನು ಧರಿಸುವಾಗ ಬೇರೆಯವರಿಗೆ ಆಕರ್ಷಣೆಯಾಗದ ರೀತಿಯಲ್ಲಿ ವಿಧ್ಯಾರ್ಥಿಗಳು ಜಾಗ್ರತೆ ವಹಿಸಿ ಉಡುಪು ಧರಿಸಬೇಕು, ನೂತನ ವ್ಯಕ್ತಿಗಳ ಸಂಪರ್ಕದಿಂದ ಹಾಗೂ ಪರಿಚಯಗಳಿಂದ ದೂರವಿರಬೇಕು. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಹಾಗೂ ಮಹಿಳಾ ಶೋಷಣೆಯ ಬಗ್ಗೆ ಎಚ್ಚರದಿಂದ ಇರಬೇಕೆಂದು ಹೇಳಿದರು. ಈ ಸಂಧರ್ಭದಲ್ಲಿ ಕೆ.ಆರ್.ಮುರಳೀಧರ್ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡಿ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಣೆ ಮಾಡಲಾಗುತ್ತಿದೆ. ಮಹಿಳೆಯರು ಅಬಲರಲ್ಲ ಸಬಲರು ಎಂದು ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. 1937ರಲ್ಲಿ ಆಸ್ಥಿಯಲ್ಲಿ ಮಹಿಳೆಗೂ ಪಾಲು ನೀಡಬೇಕು ಎಂದು ಹೇಳಲಾಯಿತು. ಮತ್ತು 2005ರಲ್ಲಿ ಸಮಾನ ಪಾಲು ಎಂದು ಸರ್ಕಾರ ಘೋಷಣೆ ಮಾಡಿತು. ಇದರಂತೆ ಹೆಣ್ಣು ಮಕ್ಕಳಿಗೂ ಆಸ್ಥಿಯಲ್ಲಿ ಸಮಾನ ಹಕ್ಕು ಇದೆಯೆಂದು ಹೇಳಿದರು. ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲರೆಡ್ಡಿ, ಉಪಾಧ್ಯಕ್ಷ ಜಿ.ವೆಂಕಟರವಣಪ್ಪ, ವಕೀಲರಾದ ಅರ್ಜುನ್, ಶಂಕರಪ್ಪ, ಶ್ರೀನಿವಾಸಗೌಡ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಚಂದ್ರ, ಸಿಡಿಪಿಓ ಮೇಲ್ವಿಚಾರಕಿ ಕಮಲಮ್ಮ ಹಾಗೂ ಮಹಿಳಾ ಸಂಘಗಳವರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here