ಮಾನವಹಕ್ಕುಗಳು ಹೆಚ್ಚಾಗಿ ಉಲ್ಲಂಘನೆ ಕಳವಳ..

0
126

ರಾಯಚೂರು:ಇಂದು ಮಾನವ ಹಕ್ಕುಗಳ ಹೆಚ್ಚಾಗಿ ಉಲ್ಲಂಘನೆ ಯಾಗುತ್ತಿದೆ ಎಂದು ನಿವೃತ್ತ ನ್ಯಾಯಾಧೀಶ ಮತ್ತು ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಕಳವಳ. ವ್ಯಕ್ತಪಡಿಸಿದರು.ನಗರದ ಎಸ್.ಎಸ್.ಆರ್.ಜಿ.ಕಾಲೇಜಿನಲ್ಲಿ ಮಾನವ ಹಕ್ಕುಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಾನವ ಹಕ್ಕುಗಳಿಲ್ಲದೆ ಬೆಳೆಯುವುದು ಅಸಾಧ್ಯ.ಅಗತ್ಯ, ಅವಶ್ಯಕಯಾಗಿದೆ.ವೈಯಕ್ತಿಕ, ಆಚಾರ-ವಿಚಾರಗಳಿಗೆ,ಸ್ವಾತಂತ್ರ್ಯಕ್ಕೆ ದಕ್ಕೆಉಂಟಾದರೆ ಮಾನವ ಹಕ್ಕುಗಳ ಉಲ್ಲಂಘನೆ ಯಾದಂತೆ ಸಾಮಾಜಿಕ ಜಾಲತಾಣಗಳು ಹೊರತುಪಡಿಸಿ ಮಾನವ ಹಕ್ಕುಗಳ ಪರಿಕಲ್ಪನೆ ಬದಲಾಗುತ್ತಿದೆ ಎಂದರು.

ವಿಶ್ವ ಜಾಗತಿಕ ಮಟ್ಟದಲ್ಲಿ ನಾವು ಗುರುತ್ತಿಸಿಕೊಳ್ಳಲು ಮಾನವ ಹಕ್ಕುಗಳ ಸಹಕಾರಿಯಾಗಿವೆ.ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಅವಶ್ಯವಾಗಿದೆ ಸರಕಾರ ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿಸಲು ಪಣತೊಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಚ್ಚುವರಿ ನ್ಯಾಯಾದೀಶ ಮಹಾದೇವಯ್ಯ,ಸುಖಾಣಿ,ಮಸ್ಕಿ ನಾಗರಾಜ,ಸತ್ಯನಾರಾಯಣ,ತ್ರಿವೇಣಿ ,ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here