ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ..!

0
236

ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ- ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ದ ಕರವೇ ಪ್ರತಿಭಟನೆ-ಸಾರ್ವಜನಿಕರ ಆಕ್ರೋಶ

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ಕಳೆದ ಕೆಲ ದಿನಗಳಿಂದ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾನವೀಯತೆ ಮರೆತ ಆಸ್ಪತ್ರೆ ಸಿಬ್ಬಂದಿ ದಿಕ್ಕಿಲ್ಲದ ಅಜ್ಜಿಯನ್ನ ರಸ್ತೆಬದಿ ಬಿಟ್ಟು ಹೋಗಿದ್ದರ ಪರಿಣಾಮ ಇಂದು ಅಜ್ಜಿ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.
ವಾರಸುದಾರರಿಲ್ಲದ ಅಜ್ಜಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಜ್ಜಿಯ ಆರೋಗ್ಯದ ಸ್ಥಿತಿ ಮಿತಿಮೀರಿದಾಗ ಆತಂಕಗೊಂಡ ದೊಡ್ಡಬಳ್ಳಾಪುರ ತಾಲ್ಲೂಕು ಆಸ್ಪತ್ರೆ ಸಿಬ್ಬಂದಿ ತಮಗ್ಯಾಕೆ ಈ ಅಜ್ಜಿಯ ಉಸಾಬರಿ ಅನ್ನೋ‌ಹಾಗೇ ಮೂರು ದಿನಗಳ ಹಿಂದೆ ಅಜ್ಜಿಯನ್ನು ರಸ್ತೆಬದಿ‌ ಬಿಟ್ಟು ಹೋಗಿದ್ದಾರೆ. ಜೀವಂತವಾಗಿದ್ದ ಅಜ್ಜಿಗೆ ಅಲ್ಲಿನ ಹೋಟೆಲ್‌ ವ್ಯಾಪಾರಿಗಳು ಅನ್ನಹಾರ ನೀಡಿದ್ದಾರೆ. ಆದರೆ ಇಂದು ಅಜ್ಜಿಯ ಆರೋಗ್ಯ ವಿಕೋಪಕ್ಕೇರಿ ಸಾವನ್ನಪ್ಪಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ. ಏನೇ ಇರಲಿ ಆಸ್ಪತ್ರೆ ಸಿಬ್ಬಂದಿ ಕನಿಷ್ಠ ಸೌಜನ್ಯ ತೋರಲಿಲ್ಲ ಅಂತ ಆರೋಪಿಸಿ ಕರವೇ ಸಂಘಟನೆ ಹಾಗೂ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ….

LEAVE A REPLY

Please enter your comment!
Please enter your name here