ಮಾನವೀಯತೆ ಮೆರೆದ ಅಧಿಕಾರಿ..

0
178

ಮಾನವೀಯತೆಯಿಂದ ಮೆರೆದ ಆರ್ಪಿಎಫ್ ಪೊಲೀಸ್ ಇನ್ ಸೆಕ್ಟರ್ ಕುಬೇಂದ್ರಪ್ಪ.

ತುಮಕೂರು: ರೈಲ್ವೆ ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದುರು ಇದೇ ಸಂದರ್ಭ ದಲ್ಲಿ ನಿಲ್ದಾಣದಲ್ಲಿ ಇನ್ ಸ್ಪೆಕ್ಟರ್ ಕುಬೇಂದ್ರಪ್ಪ ಹಾಗು ಸಿಬ್ಬಂದಿಗಳು ಪರಿಶೀಲನೆ ಮಾಡುವಾಗ ಬೆಂಚ್ ಮೇಲೆ ಇದ್ದ ಬ್ಯಾಗ್ ಕುಬೇಂದ್ರಪ್ಪ ಅವರಿಗೆ ಸಿಕ್ಕಿತ್ತು. ನಂತರ ಅದನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನೆಡೆಸಿದಾಗ ಅದರಲ್ಲಿ  ನೆಕ್ಲೇಸ್ ,  ಒಂದು ಜೊತೆ ಓಲೆ , ನಗದು 7000 ಸಾವಿರ , ರಿಸ್ಟ್ ವಾಚ್ ಹಾಗೂ ಕೆಲವು ದಾಖಲೆ ಪತ್ರಗಳು ಇದ್ದವು.

ತುಮಕೂರಿನ ಬಡೇಸಾಬ್ ಪಾಳ್ಳದ ನಿವಾಸಿ ಶಭೀನ. ಟಿ. ಎಂಬುವ ಮಹಿಳೆ ಶಿವಮೊಗ್ಗಕ್ಕೆ ಇಂದು ಬೆಳಿಗ್ಗೆ 8 ಗಂಟೆಯಲ್ಲಿ ಬೆಂಗಳೂರು – ಶಿವಮೊಗ್ಗಕ್ಕೆ ಹೋಗುವಾಗ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ರೈಲಿನಲ್ಲಿ ಬ್ಯಾಗ್ ನೋಡಿ ಕೂಂಡು ಗುಬ್ಬಿಯಲ್ಲಿ ಇಳಿದು ಬೇರೆ ರೈಲಿನಲ್ಲಿ ತುಮಕೂರಿಗೆ ಬಂದು ಬ್ಯಾಗ್ ನ್ನು ಹುಡುಕಿ ಕೊಂಡು ದುಖಿ ಸುತ್ತಿದ್ದರು ಇದನ್ನು ಗಮನಿಸಿದ ಇನ್ ಸ್ಪೆಕ್ಟರ್ ಕುಬೇಂದ್ರಪ್ಪ ಅವರು ಮಹಿಳ ೆಯನ್ನು ವಿಚಾರಿಸಿದಾಗ ಬ್ಯಾಗ್ ಕಳೆದು ಕೊಂಡಿರುವದು ದೃಡ ಪಟ್ಟಿದೆ ನಂತರ ಮಹಿಳೆಗೆ ಸಿಕ್ಕಿದ ಬ್ಯಾಗ್ ನೀಡಿದ್ದಾರೆ. ಇದರಿಂದ ಮಹಿಳೆ ಹರ್ಷ ವ್ಯಕ್ತಪಡಿಸಿದರು ಪೋಲಿಸರ ಮಾನವೀಯತೆಗೆ ನೂರಾರು ರೈಲ್ವೆ ಪ್ರಯಾಣಿಕರು ಶ್ಲಾಘನೀಯ ಎಂದು ಬಣ್ಣಿಸಿದರು ಇದೇ ಸಂದರ್ಭ ದಲ್ಲಿ ಸಿಬ್ಬಂದಿಗಳಾದ ಸತ್ಯ ನಾರಾಯಣ್, ರಾಮಲಿಂಗೇಗೌಡ ಇತರರು ಇದ್ದರು.

LEAVE A REPLY

Please enter your comment!
Please enter your name here