ಮಾರಣ ಹೋಮ ಖಂಡಿಸಿ ಮೌನ ಪ್ರತಿಭಟನೆ.

0
122

ಚಿಕ್ಕಬಳ್ಳಾಪುರ/ಚಿಂತಾಮಣಿ :-ಸಿರಿಯಾ ದೇಶದಲ್ಲಿ ಮುಗ್ಧ ಅಮಾಯಕ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಮಾರಣ ಹೋಮ ಖಂಡಿಸಿ ಹಿಂದೂ-ಮುಸ್ಲಿಂ ಬಾಂಧವರು ನಗರದ ಪ್ರವಾಸಿ ಮಂದಿರ ದಿಂದ ಬೆಂಗಳೂರು ವೃತ್ತದವರೆಗೂ ಪ್ರಮುಖ ರಸ್ತೆಗಳಲ್ಲಿ ಪಂಜು ಮತ್ತು ಮೇಣದಬತ್ತಿ ಹಿಡಿದು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುನಿಫಾ ರಜ಼ಾ ಖಾದ್ರಿ ಮಾತನಾಡುತ್ತಾ ಲಕ್ಷಾಂತರ ಮುಸ್ಲಿಂ ಜನಾಂಗದವರ ಮೇಲಿನ ಹಿಂಸೆ ನಿಲ್ಲಿಸಬೇಕು ಎಂದರು. ಸಿರಿಯಾದಲ್ಲಿ ಪ್ರಜಾಪ್ರಭುತ್ವ ಬೇಕು ಅಲ್ಲಿನ ಬಷೀರ್ ಅಲ್ ಅಸರ್ ಆವರು ಸರ್ವಾಧಿಕಾರಿಗಳ ದೌರ್ಜನ್ಯ ಮತ್ತು ಬಾಂಬ್ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯ ಮೇಲೆ ದಾಳಿ ನಡೆಸಿದೆ ಇದುವರೆಗೂ 6 ಲಕ್ಷ ಜನರನ್ನು ಕೊಂದಿದ್ದಾರೆ ಎಂದು ಇಂತಹ ಸರ್ವಾಧಿಕಾರ ಧೋರಣೆಗಾಗಿ ಅವರು ರಷ್ಯಾ ಮತ್ತು ಟರ್ಕಿ ದೇಶಗಳು ಸಹಕಾರವನ್ನು ನೀಡುತ್ತಿರುವುದನ್ನು ಖಂಡಿಸಿದರು.

ಮರಣ ಹೊಂದಿದರಿಗೆ ಒಂದು ನಿಮಿಷದ ಕಾಲ ಮೌನಾಚರಣೆ ನಡೆಸಿದರು. ನಂತರ ನಗರದ ಜಾಮಿಯಾ ಮಸೀದಿಯ ಧರ್ಮಗುರುಗಳು ಸಿರಿಯಾದಲ್ಲಿ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here