ಮಾರುಕಟ್ಟೆ ನಿರ್ಮಿಸುವಂತೆ ಮುಷ್ಕರ.

0
143

ವಿಜಯಪುರ/ಸಿಂದಗಿ:ಸಿಂದಗಿ ಪಟ್ಟಣದಲ್ಲಿ ಹಣ್ಣು ತರಕಾರಿ ಮಾರಾಟಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ವಿಫಲವಾಗಿರುವ ಪುರಸಭೆ ಧೋರಣೆ ಖಂಡಿಸಿ, ತರಕಾರಿ ಹಾಗೂ ಹಣ್ಣು ಮಾರಾಟಗಾರರು ತರಕಾರಿ ಬೀದಿಗೆ ಚೆಲ್ಲಿ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪುರಸಭೆಯ ಕಛೇರಿ ಮುಂದೆ ಜನಪ್ರತಿನಿಧಿಗಳಿಗೆ ಹಾಗೂ ಪುರಸಭೆಯ ಅಧಿಕಾರಿಗಳ ವಿರುಧ್ದ ಘೋಷಣೆ ಹಾಕುತ್ತಾ ಟಿಪ್ಪು ವೃತ್ತದಿಂದ ಪುರಸಭೆಯ ಕಾರ್ಯಾಲಯದವರೆಗೆ ಪ್ರತಿಭಟನೆ ನಡೆಸಿದರು.ಸಿಂದಗಿ ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆ ದಾಟಿದೆ, ಆದರೆ ಸುಸಜ್ಜಿತ ಮಾರುಕಟ್ಟೆ.ಇಲ್ಲ ಹಣ್ಣು ವ್ಯಾಪಾರಿಗಳು ಬೀದಿಗಳಲ್ಲಿಯೇ ಬುಟ್ಟಿಗಳು ಇಟ್ಟುಕೊಂಡು ವ್ಯಾಪಾರ ಮಾಡಬೇಕಿದೆ ಹಲವು ವರ್ಷಗಳಿಂದ ಪಟ್ಟಣದ ಎಸ್‍ಬಿಐ ರಸ್ತೆಯ ಮೇಲೆ ಕಾಯಿಪಲ್ಲೆ ಹಾಗೂ ತೋಟಗಾರಿಕೆ ಸರಕಿನ ಲಿಲಾವು ಸೇರಿದಂತೆ ರೈತ ಮಾಹಿಳೆಯರು ಬೀದಿ ಬದಿಯಲ್ಲಿಯೇ ತೊಂದರೆಗಳನ್ನು ಅನುಭವಿಸುತ್ತಾ ವ್ಯಾಪಾರ ಮಾಡುತ್ತಿದ್ದಾರೆ, ಆದರೆ ನಮ್ಮ ಪರಸ್ಥಿತಿ ಹೇಗಾಗಿದೆ ಅಂದರೆ ಕಾಲಿಗೆ ಹಾಕಿಕೊಳ್ಳುವ ಚಪ್ಪಲಿಗಳಿಗೆ ಶೂರೂಂ ನಿರ್ಮಾಣವಾಗಿವೆ ಆದರೆ ಹೊಟ್ಟಿಗೆ ತಿನ್ನುವ ಹಣ್ಣು ಹಂಪಲ, ಕಾಯಿಪಲ್ಲೆಗಳು ಬೀದಿಯಲ್ಲಿ ಇಟ್ಟು ವ್ಯಾಪಾರ ಮಾಡುವ ಸ್ಥಿತಿ ಬಂದೊದಗಿದೆ. ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳು ಯಾರೂ ಗಮನ ಹರಿಸುತ್ತಿಲ್ಲ ಈ ಹಿನ್ನಲೆಯಲ್ಲಿ ಮಾರುಕಟ್ಟೆ ನಿರ್ಮಿಸಲು ಕಾಯಿಪಲ್ಲೆಗಳನ್ನು ಬೀದಿಗೆ ಚೆಲ್ಲಿ ಹೋರಾಟ ಮಾಡಿದ್ದರೂ ಕ್ಯಾರೆ ಅನ್ನುತ್ತಿಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here