ಮಾರ್ಗಮದ್ಯ ಹೆರಿಗೆಭಾಗ್ಯ.. ಸರ್ಕಾರದ ಕೊಡುಗೆ

0
299

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಮುರಗಮಲ್ಲ ಹೋಬಳಿ ಗುಡಮಾರಹಳ್ಳಿ ಪೊಸ್ಟ್ ಸಿದ್ದೇಪಲ್ಲಿ ಕ್ರಾಸ್ ನಲ್ಲಿ ವಾಸವಾಗಿರುವ ವೆಂಕಟರತ್ನ(21)ವರ್ಷ ಗರ್ಭಿಣಿ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ತುರ್ತುವಾಹನ 108 ಆಂಬ್ಯುಲೆನ್ಸ್ ಫೋನಾಯಿಸಿದ ಒಂದು ಗಂಟೆಯ ನಂತರ 5:15 ಬಂದು 6 ಗಂಟೆ ಸಮಯಕ್ಕೆ ಚಿಂತಾಮಣಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಗೆ ತಲುಪಿದ್ದಾರೆ.
ಅಲ್ಲಿನ ಆಸ್ಪತ್ರೆಯ ದಾದಿ ತಾಯಿ ಕಾರ್ಡ್ ನೋಡಿ ಇಲ್ಲಿಂದ ನೀವು ಬೇಗಾ ಕೋಲಾರಿಗೆ ಹೋಗಿ ಎಂದು ಗರ್ಭಿಣಿ ಕೆನ್ನೆಗೆ ಬಾರಿಸಿ ಇಲ್ಲಿಂದ ಹೊರಟು ಹೋಗಿ ಇಲ್ಲ ಎಂದರೇ ಪ್ರಾಣಹೋಗುತ್ತೆ ಎಂದು ಅನಂದಮ್ಮ ಗರ್ಭಿಣಿ ಮತ್ತು ಪೋಷಕರನ್ನು ಭಯಭೀತರನ್ನಾಗಿ ಓಡಿಸಿ ಕೈ ಕೊಡವಿಕೊಂಡಿದ್ದರೆ.
ಚಿಂತಾಮಣಿ ಯಿಂದ ಕೋಲಾರಿಗೆ ಹೋಗುವ ಮಾರ್ಗ ಮದ್ಯೆ ಶಟಿಮಾದಮಂಗಲ್ ಊರಿನಲ್ ಮುಂಜಾನೆ 6:21 ಹೆರಿಗೆ ಆಗಿದೆ.ಹೆಣ್ಣು ಮಗುವಿನ ಸಾಮಾನ್ಯ ಹೆರಿಗೆ ಆಗಿದೆ. ದೇವರವದಯೆ ಯಿಂದ ತಾಯಿ ಮತ್ತು ಮಗೂ ಪ್ರಾಣಾಪಯಾ ದಿಂದ ಪಾರಾಗಿದ್ದರೆ.

ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾನಿ ಹಿಡಿದಾಗಿನಿಂದ ಮತದಾರರಿಗೆ ಆಭಾಗ್ಯ ಈಭಾಗ್ಯ ಎಂದು ಎಲ್ಲದರ ಜೊತೆ ಭಾಗ್ಯವನ್ನು ನೀಡಿ ಪಾಪ ಈ ಗರ್ಭಿಣಿ ವೆಂಟರತ್ನ ಮತ್ತು ಮುಗ್ದ ಕಂದಮ್ಮನಿಗೆ ನಡುರಸ್ತೆಯಲ್ಲಿ ಹೆರಿಗೆ ಭಾಗ್ಯವನ್ನು ಕರುಣಿಸಿದ ಸರ್ಕಾರ ಎಂದರೇ ತಪ್ಪಾಗಲಾರು. ಇನ್ಮುಂದಾದರೂ ಇಂತಹ ಘಟನೆ ಅವಕಾಶ ನೀಡದೆ ಅಮಾನವೀಯವಾಗಿ ನಡೆದುಕೊಳ್ಳುವ ಆಸ್ಪತ್ರೆ ಸಿಬ್ಬಂದಿಯನ್ನು ಹೊರಗಾಕಿ.

(ರಾತ್ರಿ ಪಾಳಿ ಕೆಲಸ ನಿರ್ವಹಿಸಿತಿದ್ದ ಡಾ ಸ್ವಾತಿ ಮತ್ತು ಶೈಲಾ ಹಾಗೂ ಆನಂದಮ್ಮ)

LEAVE A REPLY

Please enter your comment!
Please enter your name here