ಮಾರ್ಷಲ್ ಆಟ್ಸ್ ಚಾಂಪಿಯನ್ ಶಿಪ್ ಪಂದ್ಯಾವಳಿ

0
129

ಬೆಂಗಳೊರು/ಕೃಷ್ನರಾಜಪುರ;– ಗಂಡೆಯದೆ ಯುವಕ ಯುವತೀಯರು ಮಾತ್ರ ಮಿಕ್ಸ್ ಮಾರ್ಷಲ್ ಆಟ್ಸ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಸಾದ್ಯ ಎಂದು ಮಾಜಿ ಸಚಿವ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದಲಿಂಬಾವಳಿ ಅಭಿಪ್ರಾಯ ಪಟ್ಟರು.

ಕೆಆರ್ ಪುರದ ಎಸ್.ಇ.ಎ ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ಎಂಎಂಎ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಮಿಕ್ಸಿ ಮಾರ್ಷಲ್ ಆಟ್ಸ್ ಚಾಂಪಿಯನ್ ಶಿಪ್ ಪಂದ್ಯಾವಳಿಗಳ ಕೊನೆಯ ದಿನ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅರವಿಂದ ಲಿಂಬಾವಳಿ ಎಂಎಂಎ ಇದೊಂದು ವಿಭಿನ್ನ ಪ್ರಯತ್ನ, ನೋಡುಗರಿಗೆ ಇದೊಂದು ರೀತಿಯ ಭಯಾನಕ ಆಟ ಎಂದೆನಿಸುತ್ತೆ, ಆದರೂ ಸಹ ಈ ಪಂದ್ಯಾವಳಿಗಳ ಆಯೋಜಕರು ಮತ್ತು ತರಬೇತುದಾರರ ತಂತ್ರಗಾರಿಕೆಯ ಫಲವಾಗಿ ಯಾವುದೇ ರೀತಿಯ ಗಂಭೀರ ಗಾಯಗಳು ಆಗಲಿಕ್ಕೆ ಸಾದ್ಯ ಇಲ್ಲ ಎಂದರು. ನನಗೂ ದೂರದಿಂದ ನೋಡಿದಾಗ ನಿಜಕ್ಕೂ ಭಯ ಹುಟ್ಟಿಸಿತು ನಂತರ ಹತ್ತಿರದಿಂದ ನೋಡಿದಾಗ ಇದೂ ಸಹ ಎಲ್ಲಾ ರೀತಿಯ ಆಟದಂತೆ ಕಾಣಿಸಿತು, ಡಬ್ಲೊಡಬ್ಲೊಎಫ್ ತರ ತೀರ ಕೃತಕ ರೀತಿಯಲ್ಲಿಲ್ಲದ ಈ ಕ್ರೀಡೆ ಕೇವಲ ಗಂಡೆದೆಯ ಯುವಕ ಯುವತಿಯರು ಮಾತ್ರ ಆಡಬಲ್ಲರೆಂದರು. ಇನ್ನು ದೇಶಿಯ ಯಾವುದೇ ಕ್ರೀಡೆಗೆ ನನ್ನ ಸಂಪೂರ್ಣ ಸಹಕಾರ ಸದಾ ಇರುತ್ತೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯೊಳಗೆ ಆಡುವ ಕಂಫ್ಯೂಟರ್ ಮತ್ತು ಮೊಬೈಲ್ ಗೇಮ್ ಗಳಿಂದ ಹೊರ ಬಂದು ಆಟದ ಮೈದಾನದಲ್ಲಿ ಆಟಾಡುವುದರ ಮೂಕಾಂತರ ಶಾರೀರಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ಆಯೋಜಕರಾದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಜೇಶ್, ಎಂಎಂಎ ಅಸೋಸಿಯೇಷನ್ ಉಪಾಧ್ಯಕ್ಷ ಕೆವಿನ್ ಆಲ್ಫ್ರೇಡ್, ಎಂಎಂಎ ರಾಷ್ರೀಯ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಕಬ್ಬಡಿ ಪಿಳ್ಳಪ್ಪ, ಗಿರೀಶ್ ನಾಯುಡು ಮುಂತಾದವರು ಪಾಲ್ಗೊಂಡಿದ್ದರು .

LEAVE A REPLY

Please enter your comment!
Please enter your name here