ಮಿಕ್ಲೆನ್ಸ್ ಬಯೊ ಉತ್ಪಾದನಾ ಸಂಸ್ಥೆ ಉದ್ಘಾಟನೆ

0
258

ಬೆಂಗಳೂರು/ಮಹದೇವಪುರ:- ಮಿಕ್ಲೆನ್ಸ್ ಬಯೊ ಪ್ರೈವೇಟ್ ಲಿಮಿಎಡ್ (ಮಿಕ್ಲೆನ್ಸ್ ಬಯೊ) ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ಅಗ್ರಿ ಮೈಕ್ರೊಬಯಾಲ್ ಟೆಕ್ನಾಲಜಿ (ಎಎಂಟಿ)
ಸ್ಟಾರ್ಟಪ್ ಸಂಸ್ಥೆಯಾಗಿದ್ದು, ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದ್ದು ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಲೋಕಾರ್ಪಣೆಗೊಳಿಸಿದೆ.

ಮಿಕ್ಲೆನ್ಸ್ ಬಯೊ ಉತ್ಪಾದನಾ ಸೌಲಭ್ಯ ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯ ವನ್ನು ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ವಾರ್ಷಿಕ ಉತ್ಪಾದನಾ ಸಾಮಥ್ರ್ಯ 10 ಲಕ್ಷ ಲೀಟರ್ ಆಗಿದೆ. ದೇಶೀಯವಾಗಿ ಸಂಶೋಧನೆ ನಡೆಸಿ ಅಭಿವೃದ್ಧಿ ಪಡಿಸಿದ ಕೃಷಿ ಉತ್ಪನ್ನ ಆಧಾರಿತ ಘಟಕದ ಉತ್ಪನ್ನಗಳಲ್ಲಿ ಗಿಡಗಳ ಬೆಳವಣಿಗೆಗೆ ಪೂರಕವಾದ ಉತ್ಪನ್ನಗಳು, ಗಿಡಗಳ ಸಂರಕ್ಷಣೆ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳು ಸೇರಿವೆ. ಮುಖ್ಯವಾಗಿ ಈ ಉತ್ಪನ್ನಗಳು ಕೇವಲ ಬೆಳೆಗೆ ನಿರ್ಧಿಷ್ಟವಾಗಿಲ್ಲ. ಕೃಷಿಕರ ತಮ್ಮ ಅಗತ್ಯ ಆಧರಿಸಿ ಬಳಕೆ ಮಾಡುವಂತೆ ರೂಪಿಸಲಾಗಿದೆ. ಬೆಳೆ ರಕ್ಷಣೆಗೆ ಪೂರಕವಾಗಿ, ಕೃಷಿಕರ ಅಗತ್ಯ ಬೇಡಿಕೆ ಆಧರಿಸಿ ಮಿಕ್ಲೆನ್ಸ್ ಬಯೋ ಹೆಚ್ಚಿನ ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ. ಈ ಎಲ್ಲ ಉತ್ಪನ್ನಗಳನ್ನು ಕೃಷಿ ಭೂಮಿಯಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಮಿಕ್ಲೆನ್ಸ್ ಬಯೊಗೆ `ಮಾನ್ಯತೆ ಪಡೆದ ಸಾವಯವ ಕೃಷಿ ಉತ್ಪನ್ನ’ ಎಂದು ಮಾನ್ಯತೆ ಹೊಂದಿದ್ದು, ವಿಶ್ವದ ಎಲ್ಲ ಪ್ರತಿಷ್ಠಿತ ಸಂಸ್ಥೆಗಳು ಮಾನ್ಯ ಮಾಡಿವೆ. ಹೆಚ್ಚುವರಿಯಾಗಿ, ಈ ಉತ್ಪನ್ನಗಳನ್ನು ಕೆನಡಾದಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ.

ಉದ್ಘಾಟನೆ ನೆರವೇರಿಸಿದ ಡಾ|| ಸ್ಟೀಫನ್ ದೇವನೇಸನ್, `ಮಿಕ್ಲೆನ್ಸ್ ಬಯೊ ಅಂಥಹ ಸ್ಟಾರ್ಟಪ್ ಗಳ ಪರಿಸರ ಸಮತೋಲನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಉತ್ಪನ್ನಗಳ ಸಂಶೋಧನೆ, ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು ಸಂತಸದ ಸಂಗತಿ. ಈ ಉತ್ಪನ್ನಗಳು ಸುಸ್ಥಿರಾಭಿವೃದ್ಧಿಗೆ ಒತ್ತು ನೀಡುತ್ತಿವೆ. ಮಿಕ್ಲೆನ್ಸ್ ಬಯೊ ಕೃಷಿ ಉತ್ಪನ್ನಗಳು ಖಂಡಿತವಾಗಿ ಕೃಷಿ ಇಳುವರಿಯನ್ನು ಹೆಚ್ಚಿಸಲಿವೆ ಎಂಬ ವಿಶ್ವಾಸ ನಮ್ಮದು.  ಜೊತೆಗೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಮೂಡುವುದನ್ನು ತಪ್ಪಿಸಲಿದ್ದು,ಮಣ್ಣಿನ ಫಲವತ್ತತೆ ಹೆಚ್ಚಿಸಲಿವೆ ಎಂದು ತಿಳಿಸಿದರು. ನಾವು ಶುದ್ಧ ಬಯೋ ಉತ್ಪನ್ನಗಳ ಪೂರೈಕೆಗೆ ಬದ್ಧರಾಗಿದ್ದೇವೆ. ನಮ್ಮ ಸಂಶೋಧನೆಯೂ ಕೂಡಾ ವಿವಿಧ ಜೈವಿಕ ತಂತ್ರಜ್ಞಾನ ಆಧಾರಿತ ವಿವಿಧ ಉತ್ಪನ್ನಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದು, ಕೃಷಿ ಸಮುದಾಯದ ಬೇಡಿಕೆಗೆ ಸ್ಪಂದಿಸಲಿದೆ. ಅಲ್ಲದೆ, ನಮ್ಮ ಸಂಶೋಧನೆ ಕಾರ್ಯಕ್ರಮಗಳು ನವೀನ ಉತ್ಪನ್ನಗಳ ಅಭಿವೃದ್ಧಿಗೆ ಒತ್ತು ನೀಡಲಿದ್ದು, ಈ ಮೂಲಕ ಕೃಷಿ ಇಳುವರಿ ಹೆಚ್ಚಲು ನೆರವಾಗಲಿವೆ ಎಂದರು.

ಘಟಕವನ್ನು ಡಾ|| ಸ್ಟೀಫನ್ ದೇವನೇಸನ್, ಮಾಜಿ ಡೀನ್, ಕೃಷಿ ಪ್ರಾಧ್ಯಾಪಕ, ಪ್ರಧಾನ ವಿಜ್ಞಾನಿ ಮತ್ತು ಸಂಶೋಧನಾ ಸಹಾಯಕ ನಿದರ್ೇಶಕ, ಕೇರಳ ಕೃಷಿ ವಿಶ್ವವಿದ್ಯಾಲಯ, ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಿಕ್ಲೆನ್ಸ್ ಬಯೊ ಆಡಳಿತ ನಿರ್ವಹಣಾ ತಂಡ, ವಿಜ್ಞಾನಿಗಳು, ಸಾವಯವ ಕೃಷಿ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here