ಮೀಸಲಾತಿಗೆ ಮನವಿ ಸಲ್ಲಿಕೆ

0
183

ವಿಜಯಪುರ/ಸಿಂದಗಿ:ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಡಾಟಾ ಎಂಟ್ರಿ ಆಪರೆಟರ್ ಹುದ್ದೆಗಳನ್ನು ತುಂಬಿಕೊಳ್ಳುವಲ್ಲಿ ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಹಾಗೂ ತಾಲೂಕು ಶಾಖೆ ವತಿಯಿಂದ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಾಯ್.ಸಿ.ಮಯೂರ, ತಾಲೂಕಾ ಸಂಚಾಲಕ ಅಶೋಕ ಸುಲ್ಪಿ ಮಾತನಾಡಿ, ತಾಲೂಕಿನಲ್ಲಿನ ಗ್ರಾಮ ಪಂಚಾಯತಿ ಕಾರ್ಯಾಲಯಗಳಲ್ಲಿ ಡಾಟಾ ಎಂಟ್ರಿ ಆಪರೆಟರ್ ಹುದ್ದೆಗಳಿಗೆ ಅರ್ಜಿ ಜಿಲ್ಲಾ ಪಂಚಾಯತಿಯಿಂದ ಅವ್ಹಾನಿಸಲಾಗಿದೆ. ಪಂಚಾಯತಗೆ ಒಂದರಂತೆ ಹುದ್ದೆ ಇದ್ದು, ಇದರಲ್ಲಿ ಮಹಿಳೆಯರಿಗೆ, ಅಂಗಕಲರಿಗೆ, ಪರಿಶಿಷ್ಠಜಾತಿ, ಪರಿಶಿಷ್ಠ ಪಂಗಡದವರಿಗೆ, ಹಿಂದುಳಿದ ವರ್ಗದವರಿಗೆ ಹೀಗೆ ಯಾವುದು ಮಿಸಲಾತಿ ಕಲ್ಪಿಸಿಲ್ಲ. ಆದ್ದರಿಂದ ಈ ಪ್ರಕ್ರೀಯೆ ಕಾನೂನು ಬಾಹಿರವಾಗಿದೆ. ತಕ್ಷಣವೇ ಎಚ್ಚತ್ತು ಶಿಘ್ರದಲ್ಲಿ ನಿಯಮಗಳನ್ನು ಬದಲಾಯಿಸಿ ಮೀಸಲಾತಿಗೆ ಅವಕಾಸ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷಸಮಿತಿಯ ಪ್ರಕಾಶ ಗುಡಿಮನಿ, ಮುತ್ತು ಸುಲ್ಪಿ, ಪ್ರವೀಣ ಕೆ.ಎಂ. ಸೇರಿದಂತೆ ಇತರರು ಇದ್ದರು.

ಸಿಂದಗಿ : ಡಾಟಾ ಎಂಟ್ರಿ ಹುದ್ದೆಯಲ್ಲಿ ಮೀಸಲಾತಿ ಕಲ್ಪಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here