ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

0
146

ರಾಯಚೂರು.ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ವೈಭವದ ಚಾಲನೆ ನೀಡಲಾಯಿತು.

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮುನ್ನೂರು ಕಾಪು ಬಲಿಜ ಸಮಾಜ,ಎಪಿಎಂಸಿ,ಹಟ್ಟಿ ಚಿನ್ನದ ಗಣಿ, ಕನ್ನಡ ಸಂಸೃತಿ ನಿರ್ದೇಶನಾಲಯ, ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗತಕಾಲದ ವೈಭವವನ್ನು ಮರುಕಳಿಸುವ ಮೂರು ದಿನಗಳ ರಾಯಚೂರು,ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಿಕ್ಕಸುಗೂರಿನ ಚೌಕೀಮಠದ ಶ್ರೀ ಡಾ, ಸಿಧ್ದಲಿಂಗ ಮಹಾಸ್ವಾಮಿಗಳು , ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿಂದಪ್ಪ, ಜಿ, ಪಂ, ಸದಸ್ಯ ಎನ್, ಕೆಶವರೆಡ್ಡಿ, ಮುನ್ನೂರು ಕಾಪು  ಸಮಾಜದ ಕ್ರೀಡಾಧ್ಯಕ್ಷ ಪುಂಡ್ಲಾ ನರಸರೆಡ್ಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಒಂದು ವರೆ ಟನ್ ಭಾರದ ಕಲ್ಲು ಎಳೆವ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಿದರು. ಮಾಜೀ ಶಾಸಕ ಹಾಗೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ರುವಾರಿ ಎ, ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪೋಗಲ್ ಚಂದ್ರಶೇಖರ್ ರೆಡ್ಡಿ, ಎನ್,ಶ್ರೀನಿವಾಸ ರೆಡ್ಡಿ, ಯು, ಗೋವಿಂದರೆಡ್ಡಿ, ಬೆಲ್ಲಂ ನರಸರೆಡ್ಡಿ, ಬಾಯಿಕಾಡ ಶೇಕರರೆಡ್ಡಿ, ವಿಶ್ವನಾಥ ರೆಡ್ಡಿ ಗುರ್ಜಾಪುರ, ತಿರುಮಲರೆಡ್ಡಿ, ಶೇಖರ ರೆಡ್ಡಿ, ಪೆಪ್ಸಿ ಗೋವಿಂದ , ಗುಡ್ಸಿ ನರಸರೆಡ್ಡಿ, ಹರವೀ ನಾಗನಗೌಡ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here