ಮುಂದಿನ ಅವಧಿಗೂ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿ…!

0
463

ಬಳ್ಳಾರಿ /ಹೊಸಪೇಟೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೇಶದ ನಂ.-1 ಮುಖ್ಯಮಂತ್ರಿಯಾಗಿದ್ದು, ಮುಂದಿನ ಅವಧಿಯೂ ಅವರೇ ರಾಜ್ಯದ ಮುಖ್ಯಮಂತ್ರಿ ಯಾಗಲ್ಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಹೆಚ್.ಆಂಜನೇಯ ಭವಷ್ಯ ನುಡಿದರು.

ಅನಂತಶಯನ ಗ್ರಾಮದ ಬಳಿ ಆಶ್ರಮದ ಖಾಲಿ ನಿವೇಶನದಲ್ಲಿ ಶ್ರೀ ಮಾತಂಗ ಸೇವಾ ಆಶ್ರಮ-ಮಠ ಸ್ಥಾಪನೆಯ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಬೆಂಗಳೂರಿನಲ್ಲಿ 100ಕೋಟಿ ವೆಚ್ಚದಲ್ಲಿ 5 ಎಕರೆ ಡಾ. ಬಾಬು ಜಗಜೀವನರಾಮ್ ಸಂಶೋಧನ ಕೇಂದ್ರ ಸ್ಥಾಪನೆ ಮುಂದಿನ ತಿಂಗಳು ಅಡಿಗಲ್ಲು ಪೂಜೆ, 150ಕೋಟಿ ವೆಚ್ಚದಲ್ಲಿ ಲಂಡನ್ ಮಾದರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಇಂಟರ್‌ನ್ಯಾಶನಲ್ ಆಫ್ ಎಕನಾಮಿಕ್ಸ್ ಕಾಲೇಜ್ ಸ್ಥಾಪನೆಗೆ ಸಿದ್ಧತೆ ನಡೆದಿದ್ದು, ಮುಂದಿನ ತಿಂಗಳು ಕಾರ್ಯಾರಂಭವಾಗಲಿದೆ ಎಂದರು.

LEAVE A REPLY

Please enter your comment!
Please enter your name here