ಮುಂದಿನ ಆಡಳಿತವೂ ನಮ್ಮದೇ

0
371

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವ ರೋಶನ್ ಬೇಗ್. ಪವಿತ್ರ ಸ್ಥಳವಾಗಿರುವ ಮುರುಗಮಲ್ಲ ಕ್ಷೇತ್ರದ ಅಮ್ಮಜಾನ್ ಬಾವಾಜಾನ್ ದರ್ಗಾ ದರ್ಶನ ಪಡೆದ ಸಚಿವರು ಅನ್ನದಾನ ಕಾರ್ಯಕ್ರಮವನ್ನು ನೆರವೇರಿಸಿದರು. ನಮ್ಮೂರು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ಮುಂದಿನ ಕೇಂದ್ರಾಡಳಿತ ಬಿಜೆಪಿ ಪಕ್ಷದವರು ಮುಂದಿನ ಚುನಾವಣೆಯಲ್ಲಿ ಗೆದ್ದು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಹಗಲು ಕನಸು ಕಾಣುತ್ತಿದ್ದಾರೆ ಆದರೆ ಅದು ಕೇವಲ ಕನಸು ಕಾರಣ ಇತ್ತೀಚೆಗೆ ನಂಜನಗೂಡು,ಗುಂಡ್ಲುಪೇಟೆಯ ಉಪಚುನಾವಣೆಯಲ್ಲೇ ಹರಸಾಹಸ ಮಾಡಿದರೂ ಕೇವಲ ಒಂದುಕ್ಷೇತ್ರದಲ್ಲಿ ಜಯಗಳಿಸಲಾಗಲಿಲ್ಲ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕೆ ಎಂದರು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತವನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ.ಜನತೆಯ ಆಶೀರ್ವಾದ ಅವರ ಮೇಲೆ ಮತ್ತು ನಮ್ಮ ಕಾಂಗ್ರೆಸ್ ಪಕ್ಷದಮೇಲಿದೆ. ಮುಂದಿವ ಚುನಾವಣೆಯಲ್ಲೂ ನಾವೆ ಗೆದ್ದು ಬರುತ್ತೇವೆ ಕಾಂಗ್ರೆಸ್ ಪಕ್ಷದ ಆಡಳತವೇ ಮುಂದುವರೆಯುತ್ತೆ ಎಂಬ ಬರವಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here