ಮುರುಗೇಶ ನಿರಾಣಿ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಸ್ವಾಮಿಜಿ..!

0
431

ನಾನು ಬಿಳಗಿ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಂದ ಸ್ವಾಮಿಜಿ.

ಬಾಗಲಕೋಟೆ : ಸೀಮಿಕೇರಿಯ ಬ್ರಹ್ಮವಿದ್ಯಾಶ್ರಮ ಮಠದ ರಾಮಾರೂಢ ಸ್ವಾಮಿಜಿಗಳು. ಹಲವು ವರ್ಷಗಳಿಂದ ಮಠದ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿರೋ ಇವ್ರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡೋಕೆ ಸಿದ್ದತೆ ನಡೆಸಿದ್ದಾರೆ. ಮುಖ್ಯವಾಗಿ ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರು ಆಯ್ಕೆಯಾಗಿ ಆಡಳಿತ ಮಾಡಿದ್ದೇ ತಡ ಅದೀಗ ಈ ರಾಮಾರೂಢ ಸ್ವಾಮಿಜಿಗಳ ಮೇಲೆ ಮತ್ತಷ್ಟು ಪ್ರಭಾವ ಬೀರಿದೆ. ಸಾಲದ್ದಕ್ಕೆ ಭಕ್ತವಂದವೂ ಸಹ ಸ್ವಾಮೀಜಿಗಳನ್ನ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಈಗಲೇ ಸ್ವಾಮೀಜಿಗಳು ಭಕ್ತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಈ ಮಧ್ಯೆ ಸ್ವಾಮೀಜಿಗೆ ಕೆಲವು ಸಂಘಪರಿವಾರದ ನಾಯಕರು ಬೆಂಬಲಿಸಿದ್ದಾರಂತೆ. ಅಲ್ದೆ ಎರಡು ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಸಾಲದ್ದಕ್ಕೆ ಪ್ರಧಾನಿ ಮೋದಿಯವರಿಗೂ, ಅಮಿತ್ ಷಾ ಅವರಿಗೂ ಪತ್ರ ಬರೆದಿದ್ದು, ಶತಾಯುಗತಾಯ ಸ್ಪರ್ಧೆಗೆ ಮುಂದಾಗಿದ್ದಾರೆ.ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಸಿಎಂ ಆಗಿ ಉತ್ತಮ ಆಡಳಿತ ನೀಡಿದ್ದಾರೆ ಎಂದಿರೋ ರಾಮಾರೂಢ ಶ್ರೀಗಳು ತಾವು ಕೂಡ ಓರ್ವ ಶಾಸಕರಾಗಿ ಜನರ ಸೇವೆ ಮಾಡಬೇಕೆಂಬ ಆಸೆ ಇದ್ದು, ಹೀಗಾಗಿ ರಾಜಕೀಯಕ್ಕೆ ಬರಲು ನಿರ್ಧರಿಸೋದಾಗಿ ತಿಳಿಸಿದ್ದಾರೆ. ಈ ಮಧ್ಯೆ ಬೀಳಗಿ ಮತಕ್ಷೇತ್ರವು ಯಡಿಯೂರಪ್ಪನವರ ಆಪ್ತ ಮಾಜಿ ಸಚಿವ ನಿರಾಣಿಯವರ ಕ್ಷೇತ್ರವಾಗಿದ್ದು, ಬಿಜೆಪಿ ನಿರ್ಧಾರ ನೋಡಿ ಒಂದೊಮ್ಮೆ ಟಿಕೆಟ್ ಕೊಡದೇ ಹೋದಲ್ಲಿ ಪಕ್ಷೇತರರಾಗಿಯೇ ಸ್ಪರ್ಧೆ ಮಾಡಲು ಶ್ರೀಗಳು ಮುಂದಾಗಿದ್ದು, ಇದಕ್ಕೆ ಮಠದ ಭಕ್ತರು ಶ್ರೀಗಳಿಗೆ ಬೆಂಬಲ ನೀಡಿದ್ದಾರೆ.

LEAVE A REPLY

Please enter your comment!
Please enter your name here