ಮುಸ್ಲಿಂ ಬಾಂಧವರಿಂದ ಪ್ರತಿಭಟನೆ..

0
316

ಚಿಕ್ಕಬಳ್ಳಾಪುರ:ಗುಜರಾತ್ ನ ಸೋನು ಡಂಗರ್ ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಾ ಕಾರಿ ಹೇಳಿಕೆಗೆ ಮುಸ್ಲಿಂಬಾಂಧವರ ಪ್ರತಿಭಟನೆ. ಗುಜರಾತ್ ನ ಸೋನು ಡಂಗರ್ ಎಂಬುವವರು ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಾ ಕಾರಿ ಹೇಳಿಕೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಣತಾಣಗಳಲ್ಲಿ ಅಪ್ ಲೋಡ್ ಮಾಡಿರುವದನ್ನ ಖಂಡಿಸಿ ಚಿಕ್ಕಬಳ್ಳಾಪುರ ದಲ್ಲಿ ಮುಸ್ಲಿಂ ಭಾಂದವರು ಈ ಹೇಳಿಕೆಯನ್ನ ಖಂಡಿಸಿ ಈಕೆಯನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಾಮೀಯಾ ಮಸೀದಿ ಕಮಿಟಿ ನೇತೃತ್ವದಲ್ಲಿ ಸಾವಿರಾರು ಮುಸ್ಲಿಂ ಭಾಂದವರು ನಗರದ ಟೌನ್ ಹಾಲ್ ಹತ್ತಿರ ಜಾಮಿಯ ಮಸೀದಿಯಿಂದ ಪ್ರತಿಭಟನಾ ಜಾಥಾ ಆರಂಭಿಸಿ ನಗರದ ಮುಖ್ಯ ರಸ್ತೆ ಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸೋನು ಡಂಗ್ಗರ್ ರವರ ವಿರುದ್ಧ ದಿಕ್ಕಾರಗಳನ್ನು ಕೂಗಿ ಮೆರವಣಿಗೆ ಹೊರಟು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸೋನು ಡಂಗರ್ ರವರ ಪ್ರತಿಕೃತಿ ಯನ್ನು ಧಹಿಸಿ ನಂತರ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ,
ಮುಸ್ಲಿಂ ಸಮುದಾಯದವರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮೆರವಣಿಗೆಯಿಂದಾಗಿ ನಗರದ ಮುಖ್ಯ ರಸ್ತೆಗಲ್ಲಿ ಮೆರವಣಿಗೆ ಮಾಡಿದರು.ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಎಲ್ಲಾ ಮುಸ್ಲಿಂಭಾಂದವರು ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಮತಿತ್ತರರು ಭಾಗವಹಿಸಿದ್ದರು.

ವರದಿ:ಅರಿಕೆರೆ ಮುನಿರಾಜು
ನಮ್ಮೂರು ಟಿವಿ,ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here