ಮೂರುಜನ ವಿದ್ಯಾರ್ಥಿಗಳ ಸಾವು

0
266

ತುಮಕೂರು/ ಚಿಕ್ಕನಾಯಕನಹಳ್ಳಿ: ಮೂವರು ವಿದ್ಯಾರ್ಥಿಗಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಳಿಯಾರಿನಲ್ಲಿ ನಡೆದಿದೆ. ಹುಳಿಯಾರು ಬಳಿಯ ಬಳ್ಳೆಕಟ್ಟೆಯಲ್ಲಿರುವ ಮಾಜಿ ಶಾಸಕ ಕಿರಣ್ ಮಾಲಿಕತ್ವದ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿಲಯದಲ್ಲಿ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗಾದ 10ನೇ ತರಗತಿ ವಿದ್ಯಾರ್ಥಿ ಶಾಂತಮೂರ್ತಿ(16), ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯ ವಿದ್ಯಾರ್ಥಿಗಳಾದ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ಸು (14) ಮತ್ತು 10ನೇ ತರಗತಿಯ ಆಕಾಂಕ್ಷಿ ಪಲ್ಲಕ್ಕಿ(16)ಮೃತ ದುರ್ದೈವಿಗಳು. ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ಅಸ್ವಸ್ಥರಾದ ಈ ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆ ಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅನ್ನ ಸಾಂಬರ್ ಸೇವಿಸಿದ ಈ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ 8ನೇ ತರಗತಿಯ ಇನ್ನೋರ್ವ ವಿದ್ಯಾರ್ಥಿ ಮೇಲನ ಹಳ್ಳಿಯ ಸುದರ್ಶನ್ (15) ಮತ್ತು ಭದ್ರತಾ ಸಿಬ್ಬಂದಿ‌ ರಮೇಶ್ ( 45) ಅಸ್ವಸ್ಥರಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here