ಮೂರು ಗೋಪುರಗಳ ಜೀಣೋದ್ಧಾರ ಕಾರ್ಯ ಆರಂಭ

0
158

ಬಳ್ಳಾರಿ /ಹೊಸಪೇಟೆ:ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮೂರು ಗೋಪುರಗಳ ಜೀಣೋದ್ಧಾರ ಕಾರ್ಯವನ್ನು ಭಾರತೀಯ ಪುರಾತತ್ವ ಸಂರ್ವೇಕ್ಷಣಾ ಇಲಾಖೆ ಕೈಗೆತ್ತಿಕೊಂಡಿದ್ದು, ಅವುಗಳಿಗೆ ಹೊಳುಪು ನೀಡಲು ಮುಂದಾಗಿದೆ.

ಮಳೆ,ಗಾಳಿ ಹಾಗೂ ಬಿಸಿಲಿಗೆ ಮಂಕಾಗಿರುವ ದೇವಸ್ಥಾನದ ಬಿಷ್ಟಯ್ಯ, ರಾಯ ಹಾಗೂ ಕನಕಗಿರಿ ಗೋಪುರಗಳ ಜೀರ್ಣೋದ್ಧಾರ ಕೆಲಸವನ್ನು ಮಾಡಲು ಇಲಾಖೆ ಸಿದ್ಧತೆ ನಡೆಸಿದ್ದು, ಇವುಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.

ದೇವಸ್ಥಾನದ ಬಳಿ ಬಾರಿ ಉದ್ದನೇ ಬಿದಿರು ಹಾಗೂ ಮರದ ಕಟ್ಟಿಗೆ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಇನ್ನೇನು ಕಾಮಗಾರಿ ಆರಂಭ ಮಾಡುದಷ್ಟೆ ಬಾಕಿಯಿದೆ. ಈ ಮೂರು ಗೋಪುರಗಳಲ್ಲಿ ಸುಂದರನೇಯ ಉಬ್ಬು ಶಿಲ್ಪಗಳಿದ್ದು, ಕೋತಿಗಳ ಉಪಟಳ ಹಾಗೂ ಗಾಳಿ-ಮಳೆಗೆ ಮುರಿದು ಹೋಗಿ, ಕಳೆ ಗುಂದಿವೆ. ಇವುಗಳನ್ನು ಸರಿ ಪಡಿಸುವ ಕೆಲಸಕ್ಕೆ ಇಲಾಖೆ ಕೈ ಹಾಕಿದೆ.

ಬಿಷ್ಟ್ಯಯ್ಯ ಹಿರಿಯ ಗೋಪುರ:ದೇವಸ್ಥಾನ ಮುಖ್ಯ ಗೋಪುರವನ್ನು 1424ರಲ್ಲಿ ಎರಡನೇ ದೇವರಾಯನ ದಂಡನಾಯಕ ಪೋಲಘಂಟೆ ತಿಪ್ಪ ಎನ್ನುವವರು ನಿರ್ಮಾಣ ಮಾಡಿದ್ದರು. ಬಳಿಕ 1510ರಲ್ಲಿ ವಿಜಯನಗರ ಪ್ರಖ್ಯಾತ ಅರಸ ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ ಸಂದರ್ಭದಲ್ಲಿ ಈ ಗೋಪುರದ ಜೀರ್ಣೋದ್ಧಾರ ಕಾರ್ಯವನ್ನು ಮಾಡಲಾಗಿತ್ತು. 1556 ಮುಸ್ಲಿಂರ ದಾಳಿ ನಂತರ ಹಾನಿಗೊಳಗಾದ ಗೋಪುರವನ್ನು ಬಿಷ್ಟಪ್ಪಯ್ಯ ಎನ್ನುವವರು ಇದರ ಜೀಣೋದ್ಧಾರ ಕಾರ್ಯವನ್ನು ನಡೆಸಿದ್ದರಿಂದ ಬಿಷ್ಟಪಯ್ಯ ಗೋಪುರ ಎಂದು ಕೆರೆಯಲಾಗುತ್ತಿದೆ. ಮತ್ತೂ 1519ರಲ್ಲಿ ರಾಯ ಗೋಪುರವನ್ನು ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕ ಸಮಯದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಮಯದಲ್ಲಿಯೇ ಕನಕಗಿರಿ ಗೋಪುರವನ್ನು ಉಡಚಪ್ಪ ನಾಯಕ ಎನ್ನುವವರು ನಿರ್ಮಾಣ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ.

ಐತಿಹಾಸಿಕ ವಿರೂಪಾಕ್ಷೇಶ್ವರ ಹಂಪಿಯ ಮುಖ್ಯ ಆಕರ್ಷಣೀಯ ಕೇಂದ್ರವಾಗಿದೆ. ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ದೇಶ-ವಿದೇಶ ಪ್ರವಾಸಿಗರು ಬೇಟಿ ನೀಡುತ್ತಾರೆ. ದೇವಸ್ಥಾನದ ಮೂರು ಗೋಪುರಗಳು, ಗಾಳಿ-ಮಳೆಗೆ ಹಾನಿಗೊಂಡು ಕಳೆ ಗುಂದಿದ್ದು, ಇವುಗಳಿಗೆ ಹೊಳಪು ನೀಡಲು ಭಾರತೀಯ ಪುರಾತತ್ವ ಸರ್ವಕ್ಷಣಾ ಇಲಾಖೆ ಮುಂದಾಗಿರುವುದು ನಿಜಕ್ಕೂ ಉತ್ತಮ ಕಾರ್ಯವಾಗಿದೆ.

LEAVE A REPLY

Please enter your comment!
Please enter your name here