ಮೂರು ದಿನಗಳ ಕಾಲ ಶರಣ ಉತ್ಸವ..

0
130

ಬಾಗಲಕೋಟೆ:ಜಮಖಂಡಿ ತಾಲೂಕಿನ ಹುನ್ನೂರ- ಮಧುರಖಂಡಿ ಗ್ರಾಮದಲ್ಲಿರುವ ಬಸವಜ್ಞಾನ ಗುರುಕುಲದಲ್ಲಿ ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ ಮಂಟೂರು ಸ್ವಾಮಿಗಳು ಹೇಳಿದ್ರು.ಬಾಗಲಕೋಟೆ ನಗರದಲ್ಲಿ ಮಾದ್ಯಮಗೊಷ್ಠಿ ನಡಿಸಿದ ಅವರು, ಪ್ರತಿ ವರ್ಷದಂತೆ ಈ ವರ್ಷ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಂಡಿದ್ದು, ಡಿಸೆಂಬರ್ 25 ರಿಂದ 27 ರವೆಗೆ ಮೂರು ದಿನಗಳ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಬಸವಚೇತನ ಶಾಲೆಯ ವಾರ್ಷಿಕೋತ್ಸವ, ಹತ್ತರ ಹಬ್ಬ ಸ್ಮರಣ ಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರಧಾನ ಹಾಗೂ ಬಸವ ಪುತ್ಥಳಿಗೆ ಪುಷ್ಪ ವೃಷ್ಟಿ ,ವಚನ ಪಲ್ಲಕ್ಕಿ, ವಚನ ಪಟ್ಟಾಭಿಷೇಕ 63 ಶರಣ ದಂಪತಿಗಳಿಗೆ ಗೌರವಾರ್ಪಣೆ ಸಮಾರಂಭ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ತರಬಾಳು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಕಲಾ ಚೇತನ, ಅರವಿಂದ ಜತ್ತಿ ಅವರಿಗೆ ಬಸವ ಚೇತನ ಹಾಗೂ ಭಾರತ ನೀರಿನ ಡಾಕ್ಟರ್ ಅಯ್ಯಪ್ಪ ಮಸಗಿ ಅವರಿಗೆ ಕೃಷಿ ಚೇತನ ಎಂದು ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here