ಮೂರೂ ಪಕ್ಷಗಳ ಶವಯಾತ್ರೆ…!?

0
151

71 ದಿನಗಳ ಮದ್ಯ ನಿಷೇಧ ಹೋರಾಟ ಅಂತ್ಯ ಮೂರೂ ಪಕ್ಷಗಳ ಶವಯಾತ್ರೆ ಬಾಟಲಿಗಳಿಗೆ ಬೆಂಕಿ  ಹಚ್ಚಿ ಆಕ್ರೋಶ.

ರಾಯಚೂರು-ಮಧ್ಯಪಾನ ನಿಷೇದ ಮಾಡುವಂತೆ 71 ದನಗಳಿಂದ ಹಮ್ಮಿಕೊಂಡ ಆಹೋ ರಾತ್ರಿ ಧರಣೆ ಸತ್ಯಾಗ್ರಹ ಇಂದು ಮೂರು ಪಕ್ಷಗಳ ಶವಯಾತ್ರೆ ನಡೆಸಿ ಮದ್ಯದ ಬಾಟಲಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ನಗರದ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಮದ್ಯ ನಿಷೇಧ ಆದೋಲನ ವತಿಯಿಂದ 71 ದಿನಗಳಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.

71 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಇಲ್ಲಯವರೆಗೆ ಯಾವ ರಾಜಕೀಯ ಪಕ್ಷಗಳು ಬಂದು ಬೆಂಬಲ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣ ಭಟ್ಟ ಅವರು ಮಾತನಾಡಿ ಯಾವುದೇ ಆಂದೋಲನಗಳು ಯಶಸ್ವಿಯಾಗಬೇಕೆಂದರೆ ಅದರ ಬಿಸಿ ಸರ್ಕಾರಕ್ಕೆ ತಟ್ಟುವುದು ಅವಶ್ಯಕವಾಗಿದೆ ಇಲ್ಲಿಯವರೆಗೆ ನಡೆಸಿದ ಹೋರಾಟಕ್ಕೆ ಸರಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಪಕ್ಷಗಳ ನಾಯಕರಿಗೆ ಜನರ ಸೇವೆ ಅರಿವಿಗೆ ಬರುತ್ತಿದ್ದು ಜನರ ಹಿತವನ್ನು ಕಡೆಗಣಿಸಿ ಸ್ವ ಹಿತಕ್ಕೆ ಮನ್ನಣೆ ನೀಡುತ್ತಿರುವುದು ಒಂದು ದುರಂತವಾಗಿದೆ ಎಂದರು.

ಕೇವಲ ಗುಜರಾತ, ಬಿಹಾರ ರಾಜ್ಯಗಳಿಗೆ ಸೀಮಿತವಾದ ಮದ್ಯ ನಿಷೇಧ ದೇಶದ ಎಲ್ಲ ರಾಜ್ಯಗಳಿಗೂ ವಿಸ್ತಾರ ಮಾಡಬೇಕು. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಲಾಭ ಬರುತ್ತದೆ ಎನ್ನುವ ವಾದ ಸಮಂಜಸವಲ್ಲ. ಸರ್ಕಾರಗಳು ದೃಢ ನಿರ್ಧಾರಗಳು ತೆಗೆದುಕೊಂಡಲ್ಲಿ ನೂರಾರು ದಾರಿಗಳು ಹುಟ್ಟಿಕೊಳ್ಳುತ್ತೆ ಇಲ್ಲಿ ದೃಢ ನಿರ್ಧಾರಗಳು ಮುಖ್ಯ ಅಷ್ಟೆ ಎಂದರು.

ಇಲ್ಲಿಯವರಗೂ ಮದ್ಯ ನಿಷೇಧ ಕುರಿತು ಯಾವ ರಾಜಕೀಯ ಪಕ್ಷಗಳು ಮಾತನಾಡಿಲ್ಲ, ಎಲ್ಲ ಪಕ್ಷಗಳಲ್ಲಿ ಒಮ್ಮತ ಮೂಡಿದಲ್ಲಿ ಮದ್ಯ ನಿಷೇಧವೇನು ದೊಡ್ಡದಲ್ಲ, ಇಂದು ಇಲ್ಲಿ ನಡೆಸುತ್ತಿರುವ ಹೋರಾಟ ಅಲ್ಪ ಪ್ರಮಾಣದಲ್ಲಿದ್ದರೂ ಗುರಿ ದೊಡ್ಡ ಮಟ್ಟದಾಗಿದ್ದು ಸಮಾಜದ ಎಲ್ಲರ ಬೆಂಬಲ ಅವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಭಯ್ ,ಮೋಕ್ಷಮ್ಮ, ಶಿವಲಿಂಗಮ್ಮ, ಹುಸೇನಮ್ಮ, ಬಸವರಾಜ, ರೇಣುಕಮ್ಮ, ಅಫಿಜುಲ್ಲಾ, ಜೆ.ಬಿ.ರಾಜು, ವರಲಕ್ಷ್ಮಿ,ವಿರುಪಮ್ಮ, ರೇಣುಕಮ್ಮ ಸೇರಿದಂತೆ ನೂರಾರು ಮಹಿಳೇಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here