ಮೃತ (ಯೋಧ)ರೈತನಿಗೆ ಶ್ರದ್ಧಾಂಜಲಿ

0
134

ಮಂಡ್ಯ/ಮಳವಳ್ಳಿ: ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ಹಾಗೂ ನೀರಾ ಮಾರಾಟ ಗಾರರ ಸಂಘದ ವತಿಯಿಂದ ಇತ್ತೀಚಿಗೆ ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದ ಮಾಜಿ ಯೋಧ ಹಾಗೂ ರೈತ ಶಿವಣ್ಣರವರಿಗೆ ಶ್ರದ್ಧಾಂಜಲಿ ಸಭೆ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.

ಶಿವಣ್ಣರವರ ಭಾವಚಿತ್ರಕ್ಕೆ ಪುಷ್ವಾರ್ಜನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು. ನಂತರ. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ ಪುಟ್ಟಮಾಧು ಮಾತನಾಡಿ, ಶಿವಣ್ಣ ರವರು ದೇಶ ಸೇವೆ ಮಾಡಲು ಆಸೆ ಪಟ್ಟು ಆರ್ಮಿಗೆ ಸೇರಿಸಿದ್ದರು. ಆದರೆ ಮನೆಯವರ ಒತ್ತಡ ದಿಂದ ಆರ್ಮಿಯನ್ನು ತೊರೆದು. ಮತ್ತೆ ಪಟ್ಟಣಕ್ಕೆ ರೈತ ಜೀವನ ಸಾಗಿಸುವ ಜೊತೆಗೆ ಕೃಷಿ ಕೂಲಿಕಾರರ ಸಂಘದ ಜೊತೆ ಗುರುತಿಸಿಕೊಂಡು ಆದರ್ಶ ಜೀವನ ನಡೆಸುತ್ತಿದ್ದರು.ಅವರ ಸಾವು ನಮಗೆ ಹಾಗೂ ಕುಟುಂಬದವರಿಗೆ ತುಂಬಲಾರದ ನಷ್ಠವಾಗಿದೆ. ಅವರ ಆದರ್ಶಹಾದಿಯಲ್ಲಿ ನಾವೆಲ್ಲರೂ ಹೋಗೋಣ ಎಂದರು. ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಬಿ.ಎಂ ಶಿವ ಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ತಗಳವಾದಿ ವಲಯ ಸಮತಿ ಮರಿಯಪ್ಪ, ಶಿವಕುಮಾರ್, ಚನ್ನಪಿಳ್ಳೆಕೊಪ್ಪಲು ವಲಯ ಸಮಿತಿ ಅಧ್ಯಕ್ಷ ಹನುಮಂತು, ಅಂಗವಿಕಲ ಸಂಘದ ಅಧ್ಯಕ್ಷ ದೊಡ್ಡಮರಿಗೌಡರು, ನೀರಾ ಮಾರಾಟಗಾರರ ಸಂಘದ ಮಾದೇಶ್ ,ಸುರೇಶ, ರೈತ ಸಂಘದ ಅಧ್ಯಕ್ಷ ಎನ್.ಎಲ್ ಭರತ್ ರಾಜ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here