ಮೃತ ಸಂತ್ರಸ್ಥೆ ಮನೆಗೆ ಶೋಭಾ ಕರಂದ್ಲಾಜೆ ಸಾಂತ್ವನ.

0
116

ವಿಜಯಪುರ‌/ಸಿಂದಗಿ:ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ.ಮೃತ ಸಂತ್ರಸ್ಥೆ ಮನೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ. ಪೋಷಕರಿಗೆ ಸಾಂತ್ವನ.ವೈಯುಕ್ತಿಕವಾಗಿ 25,000 ಪರಿಹಾರ ಘೋಷಿಸಿದ ಶೋಭಾ.ಕೃತ್ಯವನ್ನು ಖಂಡಿಸಿದ ಶೋಭಾ ಕರಂದ್ಲಾಜೆ.ನಂತರ ಮಾಧ್ಯಮಗಳಿಗೆ ಹೇಳಿಕೆ.

ಘಟನೆ ನೋವಿನ ಸಂಗತಿ.ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ.ನಗರದಲ್ಲಿ ಏನು ನಡೆಯುತ್ತಿದೆ, ಕಾನೂನು ಪರಸ್ಥಿತಿ ಏನಾಗಿದೆ ಎಂದು ಆಕ್ರೋಶ.
ನಗರದಲ್ಲಿ ಅಫೀಮು ಹಾಗೂ ಗಾಂಜಾ ಪದಾರ್ಥ ಮಾರಾಟವಾಗುತ್ತಿದೆ.ಇದಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ.ಬಾಲಕಿ ಶವ ಮನೆಯಲ್ಲಿ ಹೇಗೆ ಸಿಕ್ಕಿತು ಎಂದು ಪ್ರಶ್ನೆ.ಈ ಕುರಿತು ಗೃಹ ಇಲಾಖೆ ಗಮನ ‌ಹರಿಸಬೇಕು.ಬಾಲಕಿ ಸಾವಿಗೆ ನ್ಯಾಯ ಸಿಗಬೇಕು.
ನಿರ್ಭಯಾ ಪ್ರಕರಣದ ಬಳಿಕ ಕ್ರಿಮಿನಲ್ ಅಮೆಂಡ್ಮೆಂಟ್ ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹ.ತಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕೆಂದು ಒತ್ತಾಯ.ಇದು ಮೃತ ಬಾಲಕಿಯ ಪೋಷಕರ ಒತ್ತಾಯವೂ ಆಗಿದೆ.ಇಂಥ ಘಟನೆಗಳಲ್ಲಿ ತಪ್ಪು ಮಾಡಿದವರ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕೆಂದು ಒತ್ತಾಯ..

ವರದಿ: ನಮ್ಮೂರು ಟಿವಿ
ನಂದೀಶ ಹಿರೇಮಠ

LEAVE A REPLY

Please enter your comment!
Please enter your name here