ಮೇಯರ್‌ ರಿಂದ ಅಧಿಕಾರ ದುರುಪಯೋಗ ?

0
356

ಸಂಭದಿಕರ ಜಗಳ ಬಿಡಿಸಲು ಹೋಗಿ ಕಾರುಜಖಂ !

ಬಳ್ಳಾರಿ /ಬಳ್ಳಾರಿ:ಸಂಭದಿಕರ ಜಗಳ ಬಿಡಿಸಲು ಹೋದ ಬಳ್ಳಾರಿ ಮೇಯರ್ ಮೇಲೆ ಹಲ್ಲೆಗೆ ಯತ್ನಸಿದ ಘಟನೆ ನಡೆದಿದ್ದು, ಘಟನೆಯಲ್ಲಿ ಮೇಯರ್ ಕಾರನ್ನು ದುಷ್ಕಮಿಗಳು ಜಖಂಗೊಳಿಸಿದ ಘಟನೆ ನಡೆದಿದೆ, ಬಳ್ಳಾರಿ ಪಾಲಿಕೆಯ ಮೇಯರ್ ಗುರ್ರಂ ವೆಂಕಟರಮಣ ಇಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನಾಳ್ ಪಟ್ಟಣದಲ್ಲಿ ಸಂಭದಿಕರ ಜಗಳ ಬಗೆಹರಿಸಲು ಹೋಗಿದ್ದರು, ಈ ವೇಳೆ ಮೇಯರ್ ಕಾರನ್ನು ದುಷ್ಕಮಿಗಳು ಜಖಂಗೊಳಿಸಿದ್ದಾರೆ, ಘಟನೆಯಲ್ಲಿ ಮೇಯರ್ ಕಾರು ಚಾಲಕನಿಗೆ ಗಾಯವಾಗಿದ್ದು, ಮೇಯರ್ ಸಹ ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ, ಘಟನೆಯಲ್ಲಿ ಮೇಯರ್ ರ ಇನ್ನೋವಾ ಕಾರಿನ ಗಾಜುಗಳು ಸಂಪೂರ್ಣ ಜಖಂಗೊಂಡಿದ್ದು, ಘಟನೆಯ ಕುರಿತು ಬೊಮ್ಮನಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮೇಯರ್ ತಮ್ಮ ಕಾರನ್ಜು ಬಳಸಲು ಅನುಮತಿ ಹೊಂದಿದ್ದರು.ಆದರೆ ನಿಯಮ ಉಲ್ಲಂಘಿಸಿ ವ್ಯಾಪ್ತಿ ಪ್ರದೇಶ ದಿಂದ ಕಾರನ್ನು ಹೊರಗಡೆ ತಗೆದುಕೊಂಡು ಹೋಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು,ಸಂಬಂಧ ಪಟ್ಟವರು ಮೇಯರ್ ವಿರುದ್ದ ಕ್ರಮ ಜರಿಗಿಸುತ್ತಾರಾ? ಎಂದು ಕಾದುನೋಡ ಬೇಕಿದೆ.

LEAVE A REPLY

Please enter your comment!
Please enter your name here