ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

0
472

ಚಿಕ್ಕ ಬಳ್ಳಾಪುರ/ಗುಡಿಬಂಡೆ: ಸೀಳುತುಟಿ, ಸೀಳು ಅಂಗಳ ಮತ್ತು ಮುಖದ ವಿಕಲಾಂಗತೆಯ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಬೆಂಗಳೂರಿನ ಲವ್ ವಿತೌಟ್ ರೀಸನ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೇ.13 ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಸತೀಶ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಆಸ್ಪತ್ರೆಯ ತಜ್ಞ ವೈದ್ಯರ ತಂಡ ರೋಗಿಗಳ ಉಚಿತ ತಪಾಸಣೆ ನಡೆಸಿ ಸೀಳುತುಟಿ ಸಮಸ್ಯೆ ಇರುವವರಿಗೆ ಬೆಂಗಳೂರಿನ ಯಶವಂತಪುರ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು.

ದಾಖಲಾದ ದಿನದಿಂದ ಗುಣವಾಗಿ ಮನೆಗೆ ಹೋಗುವ ತನಕ ಊಟ, ವಸತಿ ಉಚಿತವಾಗಿ ನೀಡುವುದರ ಜೊತೆಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಶಿಬಿರದ ಸದುಪಯೋಗ ಪಡೆಯಬೇಕು. ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ.ಸತೀಶ್ 9738820462, ಧನಂಜಯ್ 9591938844 ಅವರನ್ನು ಸಂಪರ್ಕಿಸಬಹುದು. ರಾಷ್ಟ್ರೀಯ ಬಾಲಸ್ವತ್ಯ ಕಾರ್ಯಕ್ರಮ(ಆರ್.ಬಿ.ಎಸ್.ಕೆ)ದ ಡಾ.ಯೋಗಾನಂದ್, ಡಾ.ಈಶ್ವರ್, ಡಾ.ವೈಶಾಲಿ ಮತ್ತು ಧನಂಜಯ್ ಇದ್ದರು.

LEAVE A REPLY

Please enter your comment!
Please enter your name here