ಮೊಬೈಲ್ ಆಪ್ ಬಿಡುಗಡೆ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮ..

0
294

ಬೆಂಗಳೂರು/ಮಹದೇವಪುರ:ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ ನ ಎ.ಇ.ಸಿ.ಎಸ್ ಬಡಾವಣೆಯಲ್ಲಿರುವ ಇ ಬ್ಲಾಕ್ ವಾಟರ್ ಟ್ಯಾಂಕ್ ಆಟದ ಮೈದಾನದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಸಂಸದ ಪಿ.ಸಿ.ಮೋಹನ್ ರವರ ಉಪಸ್ಥಿತಿಯಲ್ಲಿ ದೊಡ್ಡನೆಕ್ಕುಂದಿ ವಾರ್ಡ್ ಮೊಬೈಲ್ ಆಪ್ ಮತ್ತು ಸಿ.ಸಿ.ಟಿ.ವಿ ಅನಾವರಣ ಹಾಗೂ ಸ್ತ್ರೀ ಶಕ್ತಿ ಭವನ ಗುದ್ದಲಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿದರು.

1906 ಸರ್ಕಾರಿ ಶಾಲಾ ಮಕ್ಕಳು ಮತ್ತು ಪೋಷಕರಿಗೆ ವಿಮೆ ಸೌಲಭ್ಯ ಕೊಟ್ಟರು.
ಶಾಸಕ ಅರವಿಂದ ಲಿಂಬಾವಳಿ ಮಾಧ್ಯಮದ ರೊಂದಿಗೆ ಮಾತನಾಡುತ್ತಾ ಕೋಮು‌ ಸೌಹಾರ್ದತೆಗೆ ದಕ್ಕೆ ಉಂಟುಮಾಡುತ್ತಿರುವ ಸಂಘಟನೆಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಬೇಕಿದೆ.
ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯ ಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ೨೧ ಕೊಲೆಗಳಾಗಿದ್ದು ಎಲ್ಲಾ ಕೊಲೆಗಳು ಒಂದೇ ರೀತಿಯಲ್ಲಿ ಕಂಡುಬಂದಿದೆ. ಹಾಗಾಗಿ ಕೊಲೆಗಳ ಹಿಂದಿರುವ ಕಾಣದ ಕೈಗಳು, ಸಂಘಟನೆಗಳನ್ನ ನಿಷೇಧ ಹೇರಬೇಂದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಶ್ವೇತ ವಿಜಯ್ ಕುಮಾರ್, ಕ್ಷೇತ್ರದ ಅಧ್ಯಕ್ಷ ರಾಜಾರೆಡ್ಡಿ, ಬೆಂ.ನ.ಜಿಲ್ಲಾ ಉಪಾಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಮುಖಂಡರು ಜೆ.ಕೆ. ಜಯರಾಂ, ವೆಂಕಟೇಶ ರೆಡ್ಡಿ, ಚಂದ್ರಾರೆಡ್ಡಿ, ಹೂಡಿ ವಿಜಯ್ ಕುಮಾರ್, ವಾರ್ಡ್ ಅಧ್ಯಕ್ಷ ನಾಗಭೂಷಣ ರೆಡ್ಡಿ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here