ಮೊಮ್ಮಗನ ಸಾವಿನ ಸುದ್ದಿ ಕೇಳಿ ಅಜ್ಜಿಯೂ ಸಾವು..!

0
159

ಬಳ್ಳಾರಿ /ಸಿರುಗುಪ್ಪ:ಮೊಮ್ಮಗ ಮೃತಪಟ್ಟ ಸುದ್ದಿ ಕೇಳಿ ಅಜ್ಜಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಮನಕಲಕುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಅಗಸನೂರು ಗ್ರಾಮದ ೮ ವರ್ಷದ ಬಾಲಕ ಹುಲಗಪ್ಪ ಇದೇ ತಿಂಗಳು ೯ ರಂದು ಶಾಲೆಯಲ್ಲಿ ಆಟವಾಡುವ ವೇಳೆ ಮಕ್ಕಳ ಬಡಿದಾಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ೨ ನೇ ತರಗತಿ ವಿದ್ಯಾರ್ಥಿ ಹುಲಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೊಮ್ಮಗ ಇಂದು ವಿಮ್ಸ್ ನಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಹುಲಗಪ್ಪನ ಅಜ್ಜಿ ೫೫ ವರ್ಷದ ಅಂಬಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹೀಗಾಗಿ ಮೊಮ್ಮಗನ ಸಾವಿನ ಸುದ್ದಿ ತಡೆಯಲಾಗದೇ ಅಜ್ಜಿ ಸಹ ಮೃತಪಟ್ಟಿರುವುದು ನಿಜಕ್ಕೂ ಎಲ್ಲರ ಮನಕಲಕುವಂತೆ ಮಾಡಿದೆ. ಬಾಲಕನ ಶಾಲೆಯಲ್ಲಿ ಬಡಿದಾಡಿಕೊಂಡ ಬಗ್ಗೆ 

ಸಿರಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

LEAVE A REPLY

Please enter your comment!
Please enter your name here