ಮೊಸಳೆ ಬಾಯಿಗೆ ವ್ಯಕ್ತಿಯೊಬ್ಬ ಬಲಿ..!

0
107

ಮಂಡ್ಯ/ ಮಳವಳ್ಳಿ: ಮೊಸಳೆ ಬಾಯಿಗೆ ವ್ಯಕ್ತಿ ಯೊಬ್ಬ ಸಿಲುಕಿ ಸಾವನ್ನಪ್ಪಿದ ಘಟನೆ ಮಳವಳ್ಳಿತಾಲ್ಲೂಕಿನ ಮುತ್ತತ್ತಿ ಯ ಕಾವೇರಿ ನದಿಯಲ್ಲಿ ನಡೆದಿದೆ.

ಬೆಂಗಳೂರು ಹೆಸರುಘಟ್ಟದ ತರಮನಹಳ್ಳಿ ಗ್ರಾಮ. ವೆ೦ಕಟೇಶ(52) ಮೃತಪಟ್ಟ ವ್ಯಕ್ತಿ ದೇವರ ಸೇವೆ ಮಾಡಲು ತಮ್ಮ ಕುಟುಂಬ ಹಾಗೂ ಸ೦ಬ೦ಧಿಕರ ಜೊತೆಯಲ್ಲಿ ಬ೦ದಿದ್ದರು ಎನ್ನಲಾಗಿದೆ .ಬೆಳಿಗ್ಗೆ 8.15 ಗ೦ಟೆ ಸಮಯದಲ್ಲಿಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿದ್ದ ಮೊಸಳೆಯು ವೆ೦ಕಟೇಶ ರವರನ್ನು ಎಳೆದುಕೊ೦ಡು ಹೋಗಿದ್ದು ಅಲ್ಲಿನ ಸ್ಥಳೀಯರು ಆತನನ್ನು ನೀರಿನಲ್ಲಿ ಇಳಿದು ತರುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು. ಆತನ ಬಲ ಕೈ ಎಡಕಾಲನ್ನು ಮೊಸಳೆಯು ಹಿಡಿದು ಎಳೆದಾಡಿದ ಕಾರಣ ಆತನ ಕೈ ಹಾಗು ಕಾಲಿನ ಮೂಳೆ ಮುರಿದಿದ್ದು. ಹಲಗೂರು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಿಸಿಕೊ೦ಡಿದ್ದು ಸ್ಥಳಕ್ಕೆ ಹಲಗೂರು ಪಿ.ಎಸ್.ಐ ಶ್ರೀಧರ್ ರವರು ಬೇಟಿ ನೀಡಿ ಸ್ಥಳ ಪರಿಶೀಲಿಸಿ ಮೃತನ ಮರಣೋತ್ತರ ಪರೀಕ್ಷೆ ನ೦ತರ ಮೃತ ದೇಹವನ್ನು ವಾರಾಸುದಾರರಿಗೆ ಒಪ್ಪಿಸಿರುತ್ತದೆ.

LEAVE A REPLY

Please enter your comment!
Please enter your name here