ಯಕ್ಷಗಾನದಂತೆ ಬಯಲಾಟವೂ ಜನಪ್ರಿಯವಾಗಲಿ

0
143

ಬಳ್ಳಾರಿ /ಹೊಸಪೇಟೆ :ಯಕ್ಷಗಾನದಂತೆಯೇ ಬಯಲಾಟ ಕಲಾ ಪ್ರಕಾರವು ಕೂಡ ದೇಶ, ವಿದೇಶಗಳಲ್ಲಿ ಜನಪ್ರಿಯತೆಯನ್ನು ಪಡೆಯುವಂತಾಗಲಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅವರು ಹೇಳಿದರು.

ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ನಿಮಿತ್ತ ಬಳ್ಳಾರಿ ಪತ್ರಕರ್ತರಿಂದ ಜರುಗಿದ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನದ ಬಳಿಕ ಕಲಾವಿದರಿಗೆ

ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಬಯಲಾಟ ಗಂಡುಮೆಟ್ಟಿನ ಕಲೆ ಎಂದೇ ಪ್ರಸಿದ್ಧಿ.

ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಈ ಕಲೆಯನ್ನು ನಗರ ಪ್ರದೇಶಕ್ಕೆ ತರುವ ಪ್ರಯತ್ನ ಹಾಗೂ ವಿದ್ಯಾವಂತರು ಈ ಕಲಾ ಪ್ರಕಾರದತ್ತ ಆಸಕ್ತಿ ಬೆಳಸಿಕೊಳ್ಳುವಂತಾಗಲಿ ಎಂಬ ಆಶಯದಿಂದ

ಬಳ್ಳಾರಿ ಪತ್ರಕರ್ತರು ಬಯಲಾಟ ಪ್ರದರ್ಶನ ನೀಡಿದ್ದಾರೆ. ಪತ್ರಕರ್ತರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಬಯಲಾಟ ಬೆಳವಣಿಗೆಯ ಆಶಯದಿಂದ ಪ್ರದರ್ಶನಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಯಾವುದೇ ಕಲಾ ಪ್ರಕಾರ ಮುನ್ನಲೆಗೆ ಬರಲು

ಗ್ರಾಮೀಣರ ಆಸಕ್ತಿಯ ಜೊತೆಗೆ ವಿದ್ಯಾವಂತರು ಸಹಭಾಗಿತ್ವ ಬೇಕು. ಆಗ ಮಾತ್ರ ಕಲೆಯ ಬೆಳವಣಿಗೆ ಸಹಕಾರಿಯಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಇದು ಶುರುವಾಗಿದೆ. ವೈದ್ಯರು, ಅಧ್ಯಾಪಕರು ಸೇರಿದಂತೆ ಎಲ್ಲ ವಲಯದವರು ಬಯಲಾಟ ಪ್ರದರ್ಶನ ನೀಡುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ

ಡೀನ್ ಮಂಜುನಾಥ ಬೇವಿನಕಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಿರಿಯಪತ್ರಕರ್ತ ಮತ್ತಿಹಳ್ಳಿ

ಅಹಿರಾಜ್, ಶಶಿಧರ ಮೇಟಿ, ಕೆ.ನರಸಿಂಹಮೂರ್ತಿ, ಸಿದ್ಧರಾಮಪ್ಪ ಸಿರಿಗೇರಿ, ಕಿನ್ನೂರೇಶ್ವರ, ಕೆ.ಎಂ.ಮಂಜುನಾಥ್, ವೆಂಕೋಬಿ ಸಂಗನಕಲ್ಲು, ಎನ್.ವಿ.ವೀರಭದ್ರಗೌಡ, ಪುರುಷೋತ್ತಮ ಹಂದ್ಯಾಳ್, ಕೆ.ಎಂ.ಅಜೇಯ, ಗೀತಾ ಮತ್ತಿತರರು

ಅಭಿನಯಿಸಿದರು. ಮುದ್ದಟನೂರು ತಿಪ್ಪೇಸ್ವಾಮಿ ಹಾಗೂ ಬಂಡಿಹಟ್ಟಿ ಅವಧೂತ ಬಂಡಿಹಟ್ಟಿ ಹಾರ್ಮೋನಿಯಂ, ಶಿಡಗಿನಮೊಳ ವೀರೇಶ್ ತಬಲಾ ಸಾಥ್ ನೀಡಿದರು.

ಹೊಸಪೇಟೆ ಶಾಸಕ ಆನಂದಸಿಂಗ್, ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಕಂಪ್ಲಿ, ಹೊಸಪೇಟೆ ಮತ್ತಿತರ ಗ್ರಾಮಗಳ ಜನರು ಬಯಲಾಟ ವೀಕ್ಷಿಸಿದರು.

LEAVE A REPLY

Please enter your comment!
Please enter your name here