ಯಾತ್ರಾರ್ಥಿಗಳಿಗೆ ಉಪಹಾರ ಸೇವೆ

0
242

ಬಾಗಲಕೋಟೆ/ಜಮಖಂಡಿ:ತಾಲುಕಿನ ಮಧುರಖಂಡಿ ಗ್ರಾಮದ ಶ್ರೀ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಕಡಪಟ್ಟಿ ಬಸವೇಶ್ವರ ಜಾತ್ರೆ ನಿಮಿತ್ಯ ಹರಿಕೆ ಹೊತ್ತ ಭಕ್ತರು ಕಾಲನಡಿಗೆ ಮೂಲಕ ಮಧುರಖಂಡಿ ಮಾರ್ಗವಾಗಿ ಕಡಪಟ್ಟಿಗೆ ತೆರಳುವ ಸುಮಾರು 5 ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳಿಗೆ ಉಪಹಾರ ವ್ಯವಸ್ಥೆ ಮಾಡಿ ಅವರ ದನಿವನ್ನ ತಣಿಸುವ ಕಾಯಕವನ್ನ ಮಧುರಖಂಡಿಯ ಆನಂದ್ ಶಿದರಡ್ಡಿ ಪ್ರವೀಣ್ ಮಾಳೇದ್, ಖೀಳೆಗಾವಿ ಹಾಗೂ ಗೆಳೆಯರೆಲ್ಲರು ಸೇರಿ ತಮ್ಮ ಸೇವೆಯನ್ನ ಸಲ್ಲಿಸಿದ್ರು.ಕಳೆದ 7ವರ್ಷಗಳಿಂದ ಉಚಿತ ಉಪಹಾರ ವ್ಯವಸ್ಥೆ ಮಾಡುತ್ತಾ ಬಂದ ಗೆಳೆಯರ ಬಳಗ ಬನಹಟ್ಟಿ,ತೆರದಾಳ,ಮಹಾಲಿಂಗಪೂರ, ಹಾರೂಗೇರಿ,ಮೂಡಲಗಿ ಸೇರಿದಂತೆ ಕಡಪಟ್ಟಿ ಬಸವೇಶ್ವರನ ದರ್ಶನಕ್ಕೆ ಪಾದಯಾತ್ರೆ ಮೂಲಕ ಬರುವುದು ಒಂದು ಪದ್ದತಿ.ಈ ಭಾಗದ ಪಾದಯಾತ್ರಿಗಳಿಗೆ ಮಧುರಖಂಡಿ ಯುವಕರು ತಮ್ಮ ಕೈಲಾದಷ್ಟು ಹಣ ಕೂಡಿಹಾಕಿ ಭಕ್ತರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡೋ ಮೂಲಕ ಪಾದಯಾತ್ರಿಗಳ ಹಾರೈಕೆಗೆ ಪಾತ್ರರಾಗಿದ್ದಾರೆ..

LEAVE A REPLY

Please enter your comment!
Please enter your name here