ಯುಗಾದಿ ಪ್ರಯಕ್ತ ಹೋಳಿಗೆ ಭಾಗ್ಯ.

0
166

ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಬಡಜನರಿಗೆ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಈ ಭಾರಿಯ ಯುಗಾದಿ ಹಬ್ಬಕ್ಕೆ ಬಡವರಿಗೆ ಹೋಳಿಗೆ ಪ್ಯಾಕೇಜ್ ನೀಡಿದ್ದಾರೆ. ಅದೇನಪ್ಪ ಈ ಪ್ಯಾಕೇಜ್ ವಿಷೇಶ ಅಂತೀರ ಈ ಸ್ಟೋರಿ ನೋಡಿ

ಹೀಗೆ ಸಾಲು ಸಾಲಾಗಿ ಬರುತ್ತಿರುವ ಜನರು, ಜನರಿಗೆ ವಿತರಿಸಲು ಸಿದ್ದಪಡಿಸಿರುವ ಯುಗಾದಿ ಹಬ್ಬದ ಹೋಳಿಗೆ ಪ್ಯಾಕೇಜ್(ತೊಗರಿ ಬೇಳೆ, ಮೈದಾಹಿಟ್ಟು, ಎಣ್ಣೇ, ಬೆಲ್ಲ). ಹೋಳಿಗೆ ಪ್ಯಾಕೇಜ್ ಪಡೆದು ಸಂತಸದಿಂದ ಮನೆಗಳಿಗೆ ತೆರಳುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಬೆಂಗಳೂರಿನ ಗರುಡಾಚಾರ್ ಪಾಳ್ಯದ ಎಂಟಿಬಿ ನಾಗರಾಜ್ ರವರ ನಿವಾಸದ ಬಳಿ. ಅಂದಹಾಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಕಳೆದ ಹಲವು ವರ್ಷಗಳಿಂದ ತಮ್ಮ ಹಾಗು ತಮ್ಮ ಮಗ ರಾಜೇಶ್ ಹುಟ್ಟುಹಬ್ಬ ಸೇರಿದಂತೆ ಯುಗಾದಿ ಹಾಗೂ ಇನ್ನಿತರೆ ಹಬ್ಬಗಳಲ್ಲಿ ಬಡವರಿಗೆ ಬಟ್ಟೆ, ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದು, ಈ ಭಾರಿಯು ಯುಗಾದಿ ಹಬ್ಬದ ಪ್ರಯುಕ್ತ ಹೊಳೀಗೆ ತಯಾರಿಗೆ ಬೇಕಾದ ಪದಾರ್ಥಗಳನ್ನು ನಾಲ್ಕು ಸಾವಿರಕ್ಕು ಅಧಿಕ ಬಡಜನರಿಗೆ ವಿತರಿಸಿದ

ಇನ್ನು ಎಂಟಿಬಿ ನಗರಾಜ್ ರವರ ಈ ಸಾಮಾಜಿಕ ಸೇವೆ ಜೊತೆಗೆ ಪ್ರತಿ ತಿಂಗಳು ನೂರಾರು ಅಂಧರಿಗೆ ಮಾಸಿಕ ವೇತನ ನೀಡುವುದರಿಂದ ಅಂಧರ ಬಾಳಿಗೆ ಬೆಳಕಾಗಿದ್ದು ಇದರ ಸದುಪಯೋಗ ಪಡೆದ ಅಂಧರು ಎಂಟಿಬಿ ನಾಗರಾಜ್ ರವರ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಒಟ್ಟಾರೆ ಹಬ್ಬ ಹರಿದಿನಗಳು, ಬರ್ತ್ ಡೇ ಸೆಲಬ್ರೇಷನ್ ಸೇರಿದಂತೆ ಇತರ ಶುಭ ಸಮಾರಂಭಗಳಿಗೆ ಲಕ್ಷಾಂತರ ರೂಗಳನ್ನು ದುಂದುವೆಚ್ಚ ಮಾಡುವಂತಹ ಇಂದಿನ ದಿನಗಳಲ್ಲಿ, ಎಂಟಿಬಿ ನಾಗರಾಜ್ ರ ಸಮಾಜ ಸೇವೆಯಿಂದ ಸಾವಿರಾರು ಬಡಜನರು ಸಂತಸದಿಂದ ಜೀವನ ನಡೆಸುತ್ತಿದ್ದು ಇವರ ಈ ಸೇವೆ ಹೀಗೆ ಮುಂದುವರೆಯಲಿ.

LEAVE A REPLY

Please enter your comment!
Please enter your name here