ಯುವತಿಗೆ ಅಶ್ಲೀಲವಾಗಿ ಮೇಸೆಜ್ ಮಾಡಿದ್ದಕ್ಕೆ ಬಿತ್ತೂ ಸಕತ್ ಗೂಸಾ !

0
436

ಬಳ್ಳಾರಿ/ತೋರಣಗಲ್:ಜಿಂದಾಲ ಉದ್ಯೋಗಿಯೊಬ್ಬ ಯುವತಿಗೆ ಅಶ್ಲೀಲವಾಗಿ ಮೇಸೆಜ್ ಮಾಡಿದಕ್ಕೆ ಸರಿಯಾಗಿ ಧರ್ಮದೇಟು ಬಿದ್ದಿದೆ. ಬಳ್ಳಾರಿ ಮೂಲದ ಯುವತಿಯೊಬ್ಬಳಿಗೆ ಜಿಂದಾಲ ಕಾರ್ಖಾನೆಯ ಎಚ್ ಆರ್ ಡಿ ವಿಭಾಗದ ಪಿಎಫ್ ಆಪೀಸರ್ ಸಂಜೀವ ನಾಯಕ ಅಶ್ಲೀಲವಾಗಿ ಮೇಸೆಜ್ ಮಾಡಿದ್ದ. ಹೀಗಾಗಿ ಯುವತಿಯ ಕಡೆಯವರು ಸಂಜೀವನಿಗೆ ಸರಿಯಾಗಿ ಧರ್ಮದೇಟು ನೀಡಿದ ವಿಡಿಯೋ ಇದೀಗ ವೈರಲ್ ಆಗಿದೆ, ಕೆಲಸ ಮುಗಿಸಿ ಕಾರ್ಖಾನೆಯಿಂದ ಹೊರಬಂದ ಸಂಜೀವಗೆ ಮೂರು ನಾಲ್ಕು ಜನರು ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸುದ್ದಾರೆ. ಹಲ್ಲೆಗೆ ಒಳಗಾದ ಸಂಜೀವ ತಪ್ಪಾಯ್ತು ಕ್ಷಮಿಸಿ ಅಂತಾ ಕಾಲು ಮುಗಿದ್ರೂ ಯುವತಿಯ ಕಡೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ‌. ಹಲ್ಲೆಗೆ ಒಳಗಾದ ಸಂಜೀವನ ಬಾಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ, ಘಟನೆ ನಂತರ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ,ಹೀಗಾಗಿ ತೋರಣಗಲ್ ಪೊಲೀಸರು ಇದೀಗ ಹಲ್ಲೆ ಮಾಡಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ. ಆದ್ರೆ ಹಲ್ಲೆಗೆ ಒಳಗಾದ ಸಂಜೀವ ಮಾತ್ರ ಈ ಬಗ್ಗೆ ಪೊಲೀಸರಿಗೆ ಇದೂವರೆಗೂ ಸಹ ದೂರು ನೀಡಿಲ್ಲ,

LEAVE A REPLY

Please enter your comment!
Please enter your name here