ಯುವಬ್ರಿಗೇಡ್ ಲೀಡರ್ಸ್ ಮೀಟ್…

0
355

ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ
ಹಂಪಿಯಲ್ಲಿ ಯುವಬ್ರಿಗೇಡ್
ಲೀಡರ್ಸ್ ಮೀಟ್:ಪಾರಂಪರಿಕ ನಡಿಗೆ

ಬಳ್ಳಾರಿ /ಹೊಸಪೇಟೆ: ವಿಶ್ವ ಪಾರಂಪರಿಕ ಹಂಪಿಯಲ್ಲಿ ಯುವಬ್ರಿಗೇಡ್ವತಿಯಿಂದ ಪಾರಂಪರಿಕ ನಡಿಗೆ ಮೂಲಕ ಪ್ರಸಿದ್ಧ ವಿಜಯ ವಿಠಲ ದೇವಸ್ಥಾನದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನ ನಡೆಸಿ, ಜಾಗೃತಿ ಮೂಡಿಸಲಾಯಿತು.

ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಯುವ ಬ್ರಿಗೇಡ್ ಮುಖಂಡರು, ಮೊದಲಿಗೆ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಾಲಯದಿಂದ ಪಾರಂಪರಿಕ ನಡಿಗೆ ಆರಂಭಿಸಿ ದಾರಿಯುದಕ್ಕೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಿದರು.

ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ, ಉದ್ಧಾನ ವೀರಭದ್ರ ದೇವಸ್ಥಾನ, ನೆಲಸ್ತರದ ಶಿವಾಲಯ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ಕಮಲಾಪುರ ಹಾಗೂ ತಳವಾರ ಘಟ್ಟದ ಮೂಲಕ ವಿಜಯ ವಿಠಲ ದೇವಸ್ಥಾನದ ವರಗೆ ಪಾದಯತ್ರೆ ನಡೆಸಿದರು. ಬಳಿಕ ದೇಗುಲದ ಬಳಿ ಪ್ರವಾಸಿಗರು ತಿಂದು ಬಿಸಾಡಿದ ತಿಂಡಿ-ತಿನಿಸು ಇತರೆ ಪದಾರ್ಥಗಳ ಪ್ಲಾಸ್ಟಿಕ್ ಚೀಲ ಹಾಗೂ ಕರ್ವ ಸೇರಿ ಮತ್ತಿತರರ ತ್ಯಾಜ್ಯವನ್ನು ಹೊರ ಸಾಗಿಸಿ ಶುಚಿಗೊಳಿಸಿದರು.

ಇದಕ್ಕೂ ಮುನ್ನ ಹಂಪಿಯ ಶಿವರಾಮಧೂತ ಮಠದಲ್ಲಿ ಸಭೆ ನಡೆಸಿದ ಕಾರ್ಯಕರ್ತರು, ಸಂಘಟನೆ ರೂಪರೇಷಗಳು ಕುರಿತು ಚರ್ಚೆ ನಡೆಸಿ, ನೂತನ ಪದಾಧಿಕಾರಗಳನ್ನು ನೇಮಕ ಮಾಡಲಾಯಿತು. ಯುವಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ ಕೆ.ಎಸ್. ಮುಖಂಡರಾದ ಸಂತೋಷ ಸಮರ್ಥ, ಭೀರಣ್ಣ, ಶ್ರೀಧರ ಗೊರ್ನಾಳ್, ಮನೋಹರ್ ಕೌಶಿಕ್, ಮಂಜುನಾಥ ಹಾಗೂ ಚೇತನ್ ಬಲ್ಲಿಕಟ್ಟೆ, ಅಭಿಲಾಷ್ ಚೇತನ್ ಸೇರಿದಂತೆ ಸ್ಥಳೀಯ ಮುಖಂಡರಾದ ಈರಣ್ಣ ಪೂಜಾರಿ, ವಿಶ್ವನಾಥ ಮಾಳಗಿ, ರಾಚಯ್ಯ ಎಸ್.ಎಸ್. ರವಿಕುಮಾರ, ವಡ್ಡರ ವಿರೂಪಾಕ್ಷಿ ಹಾಗೂ ಹಂಪಿ ಬಸವ ಮತ್ತಿತರರು ಭಾಗವಹಿಸಿದ್ದರು. ಬೆಂಗಳೂರು, ರಾಮನಗರ, ದೊಡ್ಡ ಬಳಾಪುರ, ಬಾಗಲಕೋಟೆ, ಬೆಳಗಾಂ, ಬೀದರ್, ಗುಲ್ಬರ್ಗಾ, ರಾಯಚೂರು, ಬಿಜಾಪುರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಮುಖಂಡರು ಪಾಲ್ಗೊಂಡಿದರು.

LEAVE A REPLY

Please enter your comment!
Please enter your name here