ಯುವಶಕ್ತಿ ಸಂಘಟನೆಯಿಂದ ಸರ್ಕಾರಕ್ಕೆ ಸವಾಲ್..?

0
524

**ಶಾಶ್ವತ ನೀರಾವರಿ ಜಾರಿಯಲ್ಲಿ ಬದ್ಧತೆ ತೋರಲು ಯುವಶಕ್ತಿ ಸಂಘಟನೆ ಯಿಂದ ಸರ್ಕಾರಕ್ಕೆ ಸವಾಲ್**

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಪತ್ರ ಕರ್ತರ ಭವನದಲ್ಲಿ ಯುವಶಕ್ತಿ ಸಂಘಟನೆ ವತಿಯಿಂದ ಬಯಲುಸೀಮೆ ಜಿಲ್ಲೆ ಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಕಳೆದೆರಡು ದಶಕ ಗಳಿಂದ ನಡೆ ಯುತ್ತಿರುವ ಹೋರಾಟಕ್ಕೆ ಇದು ವರೆಗೂ ಬಂದ ಸರ್ಕಾರಗಳು ಬರೀ ಆಶ್ವಾಸನೆ ಕೊಡುವುದರಲ್ಲೇ ಕಾಲ ಕಳೆದಿವೆ ಎಂದು ಯುವ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಶಿವಪ್ರಕಾಶ್ ರೆಡ್ಡಿ ಆರೋಪಿಸದ್ದಾರೆ.

ಭಾರಿ ಭರವಸೆ ಯೊಂದಿಗೆ ಎತ್ತಿನಹೊಳೆಗೆ ಶಂಕು ಸ್ಥಾಪನೆ ಮಾಡಿದ ಸರ್ಕಾರ 2 ವರ್ಷದಲ್ಲಿ ನೀರು ಕೊಡುವುದಾಗಿ ಭರವಸೆ ಕೊಟ್ಟಿತ್ತು. ಇದೀಗ 4.5 ವರ್ಷವಾದರೂ ಶೇಕಡಾ 20 ರಷ್ಟು ಕೆಲಸ ಕೂಡ ನಡೆದಿಲ್ಲ. ಇದೀಗ ಚುನಾವಣೆಗೆ ಮುಂಚೆ ಬೆಂಗಳೂರಿನ ಸಂಸ್ಕರಿತ ನೀರನ್ನು ಹರಿಸುವುದಕ್ಕೆ ಮುಂದಾಗಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಎರಡು ಬಾರಿ ಸಂಸ್ಕರಿಸುವ ಈ ಯೋಜನೆ ಯಿಂದ ಅಪಾಯ ವಿದೆ ಎನ್ನುವದನ್ನು ಕಡೆಗಣಿಸಿ,ಮೂರುಬಾರಿ ಸಂಸ್ಕರಿಸಲು ಸತತ ವಾಗಿ ಹೋರಾಟಗಳು ಮನವಿ ಮಾಡುತ್ತಿದ್ದರೂ ಲೆಕ್ಕ ಮಾಡದಿರುವ ಸರ್ಕಾರವನ್ನು ಪ್ರಶ್ನಿಸಲು ಮುಂದಾಗಿದ್ದಕ್ಕೆ ನೀರಾವರಿ ಹೋರಾಟಗಾರರನ್ನು ಬಂಧಿಸಿ ಪ್ರಜಾಪ್ರಭುತ್ವವನ್ನು ಕಗ್ಗೊಲೆಮಾಡ ಹೊರಟಿ ದ್ದಾರೆ.ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಾವು ಮಾಡುತ್ತಿರುವ ಸವಾಲ್ ಏನೆಂದರೆ,

ಬಯಲುಸೀಮೆ ಜಿಲ್ಲೆಗಳಿಗೆ ಇದುವರೆಗೂಸರ್ಕಾರ ಗಳು ಮಾಡಿರುವ ನೀರಾವರಿ ಯೋಜನೆಗಳು, ಅದರ ವೆಚ್ಚ, ಯೋಜನೆಯಿಂದಾದ ಪ್ರತಿಫಲಗಳ ಬಗ್ಗೆ ಮಾಹಿತಿ ನೀಡಲು ಶ್ವೇತಪತ್ರ ಹೊರಡಿಸಲಿ

ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಯೋಜನೆಯ ಸಂಸ್ಕರಿತ ನೀರಿನ ಶುದ್ಧತೆಯನ್ನು ಪರಿಶೀಲಿಸಲು ಮತ್ತು ಎತ್ತಿನಹೊಳೆ ಯೋಜನೆ ಯಿಂದ ಈ ಭಾಗಕ್ಕೆ ಸಿಗುವ ನೀರಿನ ಪ್ರಮಾಣದ ಬಗ್ಗೆ ತಾಂತ್ರಿಕ ಪರಿಶೀಲನಾ ಸಮಿತಿ ರಚಿಸಿ ಜನಕ್ಕಿರುವ ಸಂಶಯವನ್ನು ನಿವಾರಿಸಲಿ ಎಂದಿದ್ದಾರೆ.

ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಇದೇ ರೀತಿ ಹೋರಾಟವನ್ನು ಮತ್ತು ಸಾರ್ವಜನಿಕರನ್ನು ಕಡೆ ಗಣಿಸಲು ಮುಂದುವರೆಸಿದಲ್ಲಿ ಬಯಲು ಸೀಮೆಯ ಮನೆ ಮನೆಗೂ ತೆರಳಿ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ತಿಳಿಸಿ ಜನಾಂದೋಲನಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸ ಬಯಸುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಭಾರ್ಗವ ರೆಡ್ಡಿ, ರಾಜ್ಯ ಜಂಟಿ ಸಂಘಟನಾ ಕಾರ್ಯದರ್ಶಿ ಮoಜು ನಾಥ ರೆಡ್ಡಿ, ಜಿಲ್ಲಾಧ್ಯಕ್ಷ ಎಸ್.ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪಿ.ನಾಗಭೂಷಣ,
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ ಕೋಟೆ ಆರ್.ನವೀನ್, ತಾಲ್ಲೂಕು ಸ0ಘಟನಾ ಕಾರ್ಯದರ್ಶಿ ಬುಕ್ಕನಹಳ್ಳಿ ಜಿ.ಸುಧಾಕರ್, ನಗರಾಧ್ಯಕ್ಷ ಎನ್.ನವೀನ್ ಕುಮಾರ್, ನಗರ ಸಂಘಟನಾ ಕಾರ್ಯದರ್ಶಿ ಕೆವಿ. ಮಣಿಕಂಠ, ವಿಶಾಲ್, ಹೆಬ್ಬರಿ ಶ್ರೀನಾಥ್ ರೆಡ್ಡಿ ಉಪಸ್ಥಿತರಿದರು.

LEAVE A REPLY

Please enter your comment!
Please enter your name here