ಯುವ ಕಾಂಗ್ರೆಸ್ ವತಿಯಿಂದ ಲೇಖನಿ ಸಾಮಾಗ್ರಿಗಳನ್ನು ವಿತರಣೆ

0
341

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಮಹಬೂಬ್ ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ 149ನೆಯ ಮಹಾತ್ಮ ಗಾಂಧೀಜಿಯವರ ಜಯಂತೋತ್ಸವ ಪ್ರಯುಕ್ತ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುಝಮಿಲ್ ಪಾಷ ಗಾಂಧೀಜಿ ರವರ ಕೊಡುಗೆ ನಮ್ಮ ದೇಶಕ್ಕೆ ಅಪಾರ ವಿದೆ ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಡಿಸಿದರು ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಗಾಂಧೀಜಿ ರವರು. ಇದೇ ರೀತಿ ಸಮಾಜ ಸೇವೆ ಮಾಡುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೆಕೇಂದು ತಿಳಿಸಿದರು.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಾದಿಕ್ ಪಾಷ.ಉಪಾಧ್ಯಕ್ಷರಾದ ವಾಸಿಮ್.ರೋಮನ್ . ಆಯೇಷಾ ಸುಲ್ತಾನ.ಶಾಲೆಯ ಮುಖ್ಯ ಶಿಕ್ಷಕಿ ಮದುರುನಿಸ್ಸ . ಹಾಗು ಶಾಲಾ ಶಿಕ್ಷಕರು ಶಿಕ್ಷಕಿಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here