ಯುವ ಸೌರಭ ಕಾರ್ಯಕ್ರಮ….

0
141

ಬಳ್ಳಾರಿ/ಹೊಸಪೇಟೆ:ನಮ್ಮ ಸಂಪ್ರದಾಯ ಕಲೆ. ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕುರಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಉಪಾಧ್ಯಕ್ಷ ಹಾಗೂ ರಂಗಭೂಮಿ ಕಲಾವಿದ ಕೆ.ಎಂ.ಹಾಲಪ್ಪ ಹೇಳಿದರು.

ತಾಲೂಕಿನ ಗಾದಿಗನೂರು ಗ್ರಾಮದ ಶ್ರೀರೇವಣ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಬಯಲು ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಹೊರ ತರಲು ಸಾಂಸ್ಕೃತಿಕ ಸೌರಭ ದಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷ ದೇವೇಂದ್ರಪ್ಪ.ಎನ್. ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಉಪಾಧ್ಯಕ್ಷ ಕೆ.ಬಿ.ಗಾದಿಲಿಂಗಪ್ಪ, ಗ್ರಾ.ಪಂ.ಸದಸ್ಯ ಮಂಜುನಾಥ ಗೋವಿಂದವಾಡ, ಎಂ.ನಾಗಭೂಷಣ, ಎಸ್.ಕೆ.ಆರ್. ಜಿಲಾನಿ ಭಾಷ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ.ವಿನೋದ ನಿರೂಪಿಸಿ, ವಂದಿಸಿದರು.

ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಕೊಂಡನಾಯಕನಹಳ್ಳಿಯ ಪಂಪಾಪತಿ ಮತ್ತು ಸಂಗಡಿಗರಿಂದ ಡೊಳ್ಳುಕುಣಿತ, ಗಾದಿಗನೂರಿನ  ಕೆ.ರಮೇಶ್ ಮತ್ತು ಸಂಗಡಿಗರಿಂದ ತಾಷಾ ರಂಡೋಲ್, ಬಳ್ಳಾರಿಯ  ಕು.ಅನಿಷ್ ಆಚಾರ್ಯ ಇವರಿಂದ ತಬಲ ಜುಗಲ್ ಬಂದಿ, ಕು.ಎಸ್.ಕೆ.ಸಾಹೇರಾ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಕು. ಶ್ರೀಪ್ರಿಯಾ ಜೆ. ಇವರಿಂದ ಕರ್ನಾಟಕ ಸಂಗೀತ, ಕು.ನಿರುಪಮ ಎಂ. ಇವರಿಂದ ವಚನ ಸಂಗೀತ, ಗಜಗಿನಹಾಳು ವೀರೇಶ್ ಜಿ ಇವರಿಂದ ಕಥಾ ಕೀರ್ತನೆ, ಮರಿಯಮ್ಮನಹಳ್ಳಿಯ ಎಲ್.ಪ್ರಶಾಂತ್ ಕುಮಾರ್ ಮತ್ತು ಸಂಗಡಿಗರಿಂದ “ಬೆಪ್ಪು ತಕ್ಕಡಿ ಬೋಳ ಶಂಕರ” ನಾಟಕ ಪ್ರದರ್ಶನಗೊಂಡವು.

LEAVE A REPLY

Please enter your comment!
Please enter your name here