ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ..

0
125

ಬೆಂಗಳೂರು/ಕೆ.ಆರ್.ಪುರ:ಸರ್ಕಾರ ಸಮಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನರ ಅಭಿವೃದ್ದಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಜಾಗೃತಿ ಮುಡಿಸುವ ಕಾರ್ಯ ಮಾಡಲಾಗುವುದೆಂದು ಜಂಟಿ ನಿರ್ದೇಶಕರಾದ ಲಕ್ಷ್ಮಣ್ರೆಡ್ಡಿ ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಿತ್ತಿಗನೂರು ಗ್ರಾಮ ಪಂಚಾಯ್ತಿಯ ಕುರುಡು ಸೊಣೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಬೆಂಗಳೂರು ನಗರ ಜಿಲ್ಲೆ ವತಿಯಿಂದ ಸರ್ಕಾರದ ಯೋಜನೆಗಳ ಜಾಗ್ರತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಜನರಿಗೆ ಹಲವಾರು ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದರೂ ಜನರು ಅದರ ಪ್ರಯೋಜನ ಪಡೆಯದೆ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ ಎಂದರು.ಶಿಕ್ಷಣ ಇಲಾಖೆಯಲ್ಲಿ 3 ನೆ ತರಗತಿಯಿಂದ ಪಿ.ಜಿ.ತರಗತಿವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಎಸ್ಸಿ\ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಸರ್ಕಾರ ಹೆಚ್ಚು ಮಹಿಳೆಯರ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ ಎಂದರು. ಇದೆ ಸಮಯದಲ್ಲಿ ಕರ್ನಾಟಕ ಸಮತಾ ಸೈನಿಕದಳ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಮಾತನಾಡಿ ನಮ್ಮ ದೇಶದಲ್ಲಿ ಬಾಬಾ ಸಾಹೇಬ್ ಡಾ|| ಅಂಬೇಡ್ಕರ್ ನೀಡಿರುವ ಸಂವಿಧಾನ ಒಪ್ಪಿಕೊಂಡಿರುವ ಜನರು ಅದರಲ್ಲಿ ನಮೂದಿಸಿರುವ ಕಾನೂನು ಪ್ರಕಾರ ಅಸ್ಪೃಷ್ಯತೆ ಆಚರಣೆ ನಿಷೇದಿಸಲಾಗಿದೆ.
ಅದರ ಪ್ರಕಾರ ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ಶಾಲೆ, ಹೋಟೆಲ್ ಮುಂತಾದ ಕಡೆ ಅಸ್ಪೃಷ್ಯತೆ ಆಚರಣೆ ನಿಷೇದಿಸಲಾಗಿದೆ ಎಂದರು. ಎಸ್ಸಿ\ಎಸ್ಟಿ ದೌರ್ಜನ್ಯ ತಡೆ ಕಾಯಿದೆಯ ಬಗ್ಗೆ ಜನರಿಗೆ ಅವಶ್ಯಕವಾಗಿ ತಿಳಿಸುವ ಅಗತ್ಯವಿದೆ ಎಂದರು. ಸರ್ಕಾರ ಈ ವರ್ಷ ಪರಿಶಿಷ್ಠರ ಅಭಿವೃದ್ದಿಗೆ 27.704 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು. ಇಲಾಖೆಯಲ್ಲಿರುವ ಸೌಲಭ್ಯಗಳನ್ನು ತಿಳಿದುಕೊಂಡು ಎಲ್ಲರಿಗೂ ತಿಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬೆಂ.ಪೂರ್ವ ತಾಲ್ಲೂಕು ಸಹಾಯಕ ನಿರ್ದೇಶಕಿ ಸಿಂದೂ, ಸುರಿ, ವರದರಾಜು, ರಘು, ರಮೇಶ್, ಆರ್.ನಾರಾಯಣ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here