ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವ ಆಚರಣೆ…

0
159

ಬಳ್ಳಾರಿ/ಹೊಸಪೇಟೆ:ಸ್ಥಳೀಯ ವಿಜಯನಗರ ರಕ್ಷಣಾ ವೇದಿಕೆಯಿಂದ 32ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.ಸ್ಥಳೀಯ ಐಎಸ್ಆರ್ ರಸ್ತೆಯಲ್ಲಿನ ವಿಜಯನಗರ ರಕ್ಷಣಾ ವೇದಿಕೆ ಕಛೇರಿಯಲ್ಲಿಂದು ಜರುಗಿದ ಸಮಾರಂಭದಲ್ಲಿ ವಿಜಯನಗರ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಕಟಿಗಿ ಜಂಬಯ್ಯ ನಾಯಕ ಹಾಗೂ ಅಧ್ಯಕ್ಷ ಕೆ.ರಾಮಪ್ಪ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ನೆಲ ರಕ್ಷಣೆಗೆ ಮುಂದಾಗಬೇಕು. ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾಗಬೇಕು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳುವ ಜೊತೆಗೆ ಇತರೆ ಭಾಷೆಗಳನ್ನು ಪ್ರೀತಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ವಿಜಯನಗರ ರಕ್ಷಣಾ ವೇದಿಕೆ ಉಪಾಧ್ಯಕ್ಷ ಭಾಷ, ನಗರ ಘಟಕದ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ತಿಮ್ಮಣ್ಣ, ಮುಖಂಡರುಗಳಾದ ಹುಲುಗಪ್ಪ, ಬಾಬು, ಭರತ, ಯಮನೂರ, ಶೇಷಣ್ಣ, ಕಂಪಲ ಕುಮಾರ, ಸವಿತಾ, ಪ್ರಕಾಶ, ಗಾಳೆಪ್ಪ, ವಕೀಲ ವಿರೂಪಾಕ್ಷಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here