ರಥ ಬೀದಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

0
173

ಬಳ್ಳಾರಿ/ಹೊಸಪೇಟೆ: ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಹೊಸಪೇಟೆಯ L.F.S. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌‌ ವಿದ್ಯಾರ್ಥಿ‍ಗಳು ಹಂಪಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ರಥ ಬೀದಿಯನ್ನು ಸ್ವಚ್ಛಗೊಳಿಸಿದರು. ವಿರೂಪಾಕ್ಷೇಶ್ವರ ದೇವಾಸ್ಥಾನ ಮತ್ತು ರಥ ಬೀದಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂದವಾದ ಸಮವಸ್ತ್ರಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಲೂಕು ಪಂಚಾಯತ್ ಸದಸ್ಯ ಪಾಲಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಸ್ವಾತಿ ಸಿಂಗ್, ಮಂಜುನಾಥ ಗೌಡ, ವಿರೂಪಾಕ್ಷ ಗೌಡ, ಗೋಪಿನಾಥ, ಸಮಾಜ ಸೇವಕ ಬಸವರಾಜ ವಿಠಲ್ ಗೌಡರ್ ಮುಂತಾದವರು ಭಾಗವಹಿಸದ್ದರು.

LEAVE A REPLY

Please enter your comment!
Please enter your name here