ರಸ್ತೆಗಾಗಿ ಬೀದಿಗಿಳಿದ ಟೆಕ್ಕಿಗಳು…!?

0
123

ಬೆಂಗಳೂರು ಗ್ರಾಮಾಂತರ /ಹೊಸಕೋಟೆ:- ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ತಿರುಮಲ ಶೆಟ್ಟಿಹಳ್ಳಿಯಲ್ಲಿ ಸ್ಥಳೀಯ ಅಪಾರ್ಟ್ಮೆಂಟ್ ವಾಸಿಗಳು, ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕಳೆದ ಹದಿನೈದು ವರ್ಷಗಳಿಂದಲೂ ಈ ರಸ್ತೆ ಅಭಿವೃದ್ಧಿಯನ್ನು ನಾವು ಕಂಡಿಲ್ಲ , ಪ್ರತಿನಿತ್ಯ ಈ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳು, ಕಚೇರಿ ಗಳಿಗೆ ತೆರಳುವ ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗಿದೆ ಎಂದು ಸುರೇಶ್ ಗೌಡ ದೂರಿದರು.
ಸ್ಥಳೀಯ ಶಾಸಕರಿಗೆ, ಸಂಬಂಧಪಟ್ಟ ಇಲಾಖೆಯ ಅದಿಕಾರಿಗಳಿಗೆ ಹಲವು ಭಾರಿ ದೂರುನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲೆಂದು ರಾಹುಲ್ ಬೇಸರ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ಓಡಾಡಲು ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ, ಕಾಡುಗುಡಿಯಚನ್ನಸಂದ್ರ ದಿಂದ ಚಿಕ್ಕತಿರುಪತಿಗೆ ಹೋಗಬೇಕಾದ ರಸ್ತೆ ಒಂದೇ ಇದ್ದ ಕಾರಣ ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವೇ ಇಲ್ಲ ಎಂದು ಅಳಲು ತೋಡಿಕೊಂಡರು.
ಕಳೆದ ಮೂರು ತಿಂಗಳ ಹಿಂದೆ ರಸ್ತೆಯ ಬಗ್ಗೆ ಕೇಳಿದಾಗ, ಈ ರಸ್ತೆಯ ಮಾರ್ಗವಾಗಿ ಕೋಲಾರ ರೈತರಿಗೆ ಕೆಸಿ ವ್ಯಾಲಿ ಪೈಪ್ ಲೈನ್‌ ಕೆಲಸ ಚಾಲ್ತಿಯಲ್ಲಿದೆ ಕೆಲಸ ಮುಗಿದ ನಂತರ ರಸ್ತೆ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರೆಂದು ಜ್ಞಾನೇಶ್ ಹೇಳಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಒಂದು ರಸ್ತೆಯನ್ನು ಅಭಿವೃದ್ಧಿ ಮಾಡಬೇಕೆಂದು ಕೇಳಿಕೊಂಡರು.

ಏನೇ ಆಗಲಿ ಪುಟ್ಟ ಮಕ್ಕಳು, ಮಹಿಳೆಯರು, ಟೆಕ್ಕಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವ ವರೆಗೂ ಸಂಬಂಧಪಟ್ಟವರು ತಮ್ಮ ಜವಾಬ್ದಾರಿ ಮರೆತು ಸುಮ್ಮನಿರುವುದು ಬೇಸರದ ಸಂಗತಿ .

LEAVE A REPLY

Please enter your comment!
Please enter your name here