ರಸ್ತೆಬದಿಯ ಬಿಕ್ಷುಕರ ಕೊಲೆ.

0
203

ಬೆಂಗಳೂರು/ಹೋಸಕೊಟೆ:- ರಸ್ತೆ ಬದಿಯಲ್ಲಿ ಮಲಗಿದ್ದ ಇಬ್ಬರು ಬಿಕ್ಷುಕರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆ ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಓರ್ವನು ವ್ಯಕ್ತಿ ಹೊಸಕೋಟೆ ಪಟ್ಟಣದ ನಿವಾಸಿ ಮುನಿನಾರಾಯಣಪ್ಪನ ಮಗ ರಮೇಶ(36) ಹಾಗು ಗುರುತು ಸಿಗದ ಸುಮಾರು 35 ವರ್ಷದ ಮಹಿಳೆ ಯಾಗಿದ್ದಾರೆ. ರಾತ್ರಿ ಸುಮಾರು 2 ರಿಂದ 3 ಗಂಟೆ ಸಮಯದಲ್ಲಿ ಈ ಕೃತ್ಯ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಹೊಸಕೋಟೆ ಪೋಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here