ರಸ್ತೆ ಅಗಲಿಕಾರಣ ಮಾಡುವಂತೆ “ಉಪವಾಸ ಸತ್ಯಾಗ್ರಹ “..

0
117

ಮಹದೇವಪುರ: ದಿನಕ್ಕೆ ಸಾವಿರಾರು ವಾಹನಗಳು ಸಂಚಾರ ಹಾಗೂ ಟ್ರಾಫಿಕ್ ಸಮಸ್ಯೆಯಿಂದಾಗಿ ಸ್ಥಳೀಯರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ ಎಂದು ವರ್ತೂರು ನಾಗರಾಜ್ ತಿಳಿಸಿದರು‌.

ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡ್- 149 ಮುಖ್ಯರಸ್ತೆಯಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಉಂಟಮಾಡುತ್ತಿದೆ, ವರ್ತೂರು ರಸ್ತೆ ಅಗಲೀಕಾರಣಕ್ಕಾಗಿ ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹವನ್ನು ವರ್ತೂರಿನ ಗ್ರಾಮಸ್ಥರಿಂದ ಹಮ್ಮಿಕೊಳ್ಳಲಾಗಿತ್ತು‌‌.

ಉಪವಾಸವನ್ನು ವರ್ತೂರು ನಾಗರಾಜ್ ಅವರು ಮಾಡುತ್ತಿದ್ದು,ಇಂದು ನನ್ನ ಹುಟ್ಟು ಹಬ್ಬ ಇಂದು ನಾನು ಒಂದು ತೊಟ್ಟು ನೀರು ಸಹ ಕುಡಿಯದೆ ನಮ್ಮ ಸುತ್ತಮುತ್ತಲಿನ ಗ್ರಾಮಸ್ಥರಿಗೆ,ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ವೃದರಿಗೆ ರಸ್ತೆ ದಾಟುವಾಗ ಹೆಚ್ಚಿನ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಉಂಟುಮಾಡುತ್ತಿರುವ ಕಿರಿದಾದ ರಸ್ತೆಯೇ ಕಾರಣ, ಅದರಿಂದ ಈ ಕೂಡಲೆ ರಸ್ತೆ ಅಗಲಿ ಕಾರಣ ಮಾಡಿ ಟ್ರಾಫಿಕ್ ಫ್ರೀ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಉಪವಾಸ ಸತ್ಯಾಗ್ರಹವನ್ನು ವರ್ತೂರು ಸ್ಥಳೀಯರಿಂದ ಹಮ್ಮಿಕೊಳ್ಳಲಾಗಿದೆ, ಸ್ಥಳಕ್ಕೆ ಪಾಲಿಕೆ ಸದಸ್ಯರು, ಶಾಸಕರು ಬಂದು ನಮ್ಮ ಸಮಸ್ಯೆಗಳನ್ನು ತಿಳಿದ್ದು ಮನವಿಸ್ವೀಕಾರಿಸಬೇಕು ಅಲಿಯವರೆಗೂ ನಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತಿವೆ ಎಂದು ತಿಳಸಿದರು.

ಈ ಸಂಧರ್ಭದಲ್ಲಿ ಸ್ಥಳೀಯರಾದ ವರ್ತೂರು ನಾಗರಾಜ್, ಅಶ್ವತ್ ರೆಡ್ಡಿ, ಬಾಬು, ಡಿಟಿಎಸ್ ಮಂಜು, ಪಟೇಲ್ ಕಿರಣ್, ಗುಂಜೂರು ಶ್ರೀನಿವಾಸ್ ಮುಂದಾದರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರು‌.

LEAVE A REPLY

Please enter your comment!
Please enter your name here