ರಸ್ತೆ ಅಗಲೀಕರಣದಿಂದ ತೊಂದರೆ..

0
173

ಬೆಳಗಾವಿ/ಗೋಕಾಕ:ಗೋಕಾಕ ಫಾಲ್ಸ್ ನಡುವಿನ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆಯ ಸಂಚಾರವನ್ನು 13 ದಿನಗಳಿಂದ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಭಾರಿ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಕೂಡಲೇ ಮುಕ್ತಗೊಳಿಸಬೇಕು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.

ಸಾರ್ವಜನಿಕರ ಜತೆಗೂಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಣಾಧಿಕಾರಿ ಎ.ಬಿ.ಹೊನ್ನಾವರ ಅವರನ್ನು ಬುಧವಾರ ಭೇಟಿ ಮಾಡಿ, ಕೂಡಲೇ ರಸ್ತೆಯನ್ನು ಸಾರ್ವಜನಿಕ ಸಂಪರ್ಕಕ್ಕೆ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಕಾಕ ನಗರ ಮತ್ತು ಗೋಕಾಕ ರೇಲ್ವೇ ನಿಲ್ದಾಣದ ನಡುವೆ ವಾಹನ ಮತ್ತು ಜನಸಂಪರ್ಕ ಹೆಚ್ಚಿರುತ್ತದೆ. ಗೋಕಾಕ ಫಾಲ್ಸ್ ಬಳಿ ನೂಲಿನ ಗಿರಣಿ, ಗೋಕಾಕ ಫಾಲ್ಸ, ಹಿಡಕಲ್ ಡ್ಯಾಂ, ಗೊಡಚಿನಮಲ್ಕಿ ಸಹಿತ ಹಲವು ಪ್ರವಾಸಿ ತಾಣಗಳಿವೆ. ಇಲ್ಲಿಗೆ ಭೇಟಿ ನೀಡುವ ಕೊಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ಗೋಕಾಕ ಫಾಲ್ಸ್, ಕೊಣ್ಣೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕೂಲಿ ಕೆಲಸ, ವಿದ್ಯಾಭ್ಯಾಸ ಹಾಗೂ ಆಸ್ಪತ್ರೆಗೆಂದು ಗೋಕಾಕ ನಗರಕ್ಕೆ ಬರುತ್ತಾರೆ. ಆದರೆ ರಸ್ತೆ ಸಂಚಾರ ಬಂದ್ ಆಗಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ ಎಂದು ಅನುಭವಿಸುತ್ತಿದ್ದಾರೆ ಎಂದು ಪೂಜಾರಿ ವಿವರಿಸಿದರು.

ರಸ್ತೆ ಅಗಲೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಕಲ್ಲು ಒಡೆಯುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ರಸ್ತೆಯನ್ನು ಶೀಘ್ರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಗೋಕಾಕ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಬಿಜೆಪಿ ಮುಖಂಡ ಶಾಮನಂದ ಪೂಜೇರಿ, ಶ್ರೀರಾಮ ಸೇನೆ ಮುಖಂಡರಾರ ರಾಜು ಜಾಧವ, ಸುನೀಲ ಮುರ್ಕಿಬಾವಿ, ದಸ್ತಗೀರ ಪೈಲವಾನ, ಸತೀಶ ಪೂಜಾರಿ, ಬಸವರಾಜ ಇಟ್ನಾಳ, ಶಿವಾನಂದ ಕೊಳದೂರ, ಪ್ರವೀಣ ಹಿರೇಮಠ, ಆಜಾಂ ಮುಜಾವರ, ಬಸು ಹಮ್ಮಿನ, ಅರುಣ ನಾಯ್ಕರ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here