ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ..

0
111

ಬೆಂಗಳೂರು/ಕೆ‌ ಆರ್ ಪುರ:ರಸ್ತೆ ಸಂಚಾರ ನಿಯಂತ್ರಣಕ್ಕೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಬೈರತಿ ಬಸವರಾಜು ತಿಳಿಸಿದರು.
ದೇವಸಂದ್ರ ವಾರ್ಡ್‌ನ ಐಟಿಐ ಗೇಟ್ ಬಳಿ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೆಆರ್ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಂಜೀವ್ರಾಯಪ್ಪ ಸಂಚಾರ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ನೀಡುತ್ತಿದ್ದು, ಅವರೊಂದಿಗೆ ಸಹಕರಿಸಿ ಟ್ರಾಪಿಕ್ ನಿಯಂತ್ರಣಕ್ಕೆ ಕೈ ಜೋಡಿಸುತ್ತಿರುವುದಾಗಿ ಹೇಳಿದರು.
ಕೆಆರ್ಪುರ ಭಾಗದಿಂದ ಮಾರತ್ತಹಳ್ಳಿ ಹಾಗೂ ರಾಮಮೂರ್ತಿ ನಗರ ಕಡೆ ಹೋಗುವ ವಾಹನಗಳು ಕಿರಿದಾದ ರಸ್ತೆಯನ್ನು ಬಳಸಿ ಹೋಗುವುದರಿಂದ ದಿನನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಟ್ರಾಪಿಕ್ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರೊಂದಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದರು.
ಕಾಮಗಾರಿ ನಡೆಯುವ ವೇಳೆ ವಾಹನ ಸವಾರರಿಗೆ ಕೆಲ ದಿನಗಳ ಕಾಲ ಅಡಚಣೆ ಉಂಟಾಗಲಿದ್ದು, ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಸವನ್ನು ಎಲ್ಲೆಂದರಲ್ಲಿ ಹಾಕದೆ ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಕೋರಿಕೊಂಡರು.
ಇದೇ ವೇಳೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶ್ರೀಕಾಂತ್,ನಾಮ ನಿರ್ದೇಶಿತ ಸದಸ್ಯ ಅಂತೋನಿ ಸ್ವಾಮಿ,ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಸಂಜೀವ್ರಾಯಪ್ಪ, ಮುಖಂಡರು ನಾರಾಯಣಸ್ವಾಮಿ, ಇಟಾಚಿ ಮಂಜುನಾಥ್, ಮಾಜಿ ಸೈನಿಕ ಶಿವಪ್ಪ, ವೆಂಕಟರಾಮ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here