ರಸ್ತೆ ಅಪಘಾತ,ಐದುಜನರಿಗೆ ಗಂಭೀರ ಗಾಯ..

0
1576

ತುಮಕೂರು/ಪಾವಗಡ: ಟಾಟಾ ಸುಮೋ ಮತ್ತು ಒಮಿನಿ ಮುಖಾಮುಖಿ ಡಿಕ್ಕಿ ಒಮೀನಿಯಲ್ಲಿದ್ದ ಐದು ಜನರು ಗಂಭೀರ ಗಾಯಗೊಂಡ ಘಟನೆ ಪಟ್ಟಣದ ಶ್ರೀ ರಾಮಕೃಷ್ಣ ಆಶ್ರಮ ಸಮೀಪ ನಡೆದಿದೆ.
ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಪಾವಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅವೈಜ್ಞಾನಿಕ ರೀತಿಯಲ್ಲಿ ಕೇಶಿಪ್ ರಸ್ತೆ ವಿಭಜನ ನಿರ್ಮಾಣ ಮದ್ಯೆ ಎತ್ತರದ ಕಂಬಿಗಳನ್ನು ಹಾಕಿರುವ ಕಾರಣ ವಾಹನ ಸವಾರರಿಗೆ ಪಕ್ಷದ ರಸ್ತೆಯಲ್ಲಿ ಬರುವ ವಾಹನಗಳು ಕಾಣೆಸದೆ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇವೆ ಆದರೆ ಈ ಬಗ್ಗೆ ಕೇಶಿಪ್ ಸ್ಪಂದಿಸುತ್ತಿಲ್ಲ ಎಂಬುದು ವಾಹನ ಸವಾರರ ಆವೇದನೆಯಾಗಿದೆ.

ಇಷ್ಟೆಲ್ಲಾ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳಾಗಲಿ,ಗುತ್ತಿಗೆದಾರರಾಗಲೀ ಇತ್ತ ಗಮನಹರಿಸದೇ ಇರುವುದು ಜನಸಾಮಾನ್ಯರ ಧೌರ್ಭಾಗ್ಯ ವೆಂದರೇ ತಪ್ಪಾಗಲಾರದು.

ಇನ್ನು ಜನಪ್ರತಿನಿಧಿಗಳಿಗಂತೂ ಇದರಪರಿವೇಯೇ ಇಲ್ಲ ಎಂಬಂತೆ ಸಾಮಾನ್ಯರ ಪ್ರಾಣಹೋದರೂ ಅದರಬಗ್ಗೆ ಕಿಂಚಿತ್ತೂ ತಲೆಕೆಡೆಸಿಕೊಳ್ಳದೇ ಮಾನವೀಯತೆಯನ್ನೆ ಮರೆತು ಕೂತಿರುವ ಇವರಿಗೆ ಪ್ರಣದ ಬೆಲೆಯೇ ಗೊತ್ತಿಲ್ಲದಂತಾಗಿದೆ. ಒಂದಿಷ್ಟು ಮಾನ ಮರ್ಯಾದೆ ಇರುವವರ್ಯಾರಾದರೂ ಇದ್ದಲ್ಲಿ ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸುವಂತಾಗಲಿ ಎಂಬ ಆಶಯ ನಮ್ಮದು.

LEAVE A REPLY

Please enter your comment!
Please enter your name here