ರಸ್ತೆ ಅಪಘಾತ,ಚಾಲಕ ಸಾವು.

0
135

ತುಮಕೂರು:ರಸ್ತೆ ಅಪಘಾತದಲ್ಲಿ ಹುಳಿಯಾರಿನ ಬಸವೇಶ್ವರ ಜುವೆಲರ್ಸ್ ನ ಮಲ್ಲಿಕಾರ್ಜುನ ಸ್ವಾಮಿ ಸಾವು.

ರಾತ್ರಿ ಹನ್ನೆರಡು ಮೂವತ್ತುರ ಸಮಯದಲ್ಲಿ ನಡೆದಿರುವ ಅಪಘಾತ.

ಹುಳಿಯಾರಿನ ತಿಪಟೂರು ರಸ್ತೆಯ ಬಳಿ ಬಂಡೆಯ ತಿರುವಿನಲ್ಲಿ ಹುಣುಸೆಮರಕ್ಕೆ ಗುದ್ದಿ ಸಂಭವಿಸಿದ ಅಪಘಾತ.

ಬೀರೂರಿನ ಸಂಬಂಧಿಕರ ಮದುವೆಗೆ ತೆರಳಿ ವಾಪಸ್ಸು ಬರುವಾಗ ನಡೆದ ಘಟನೆ.

ಕಾರಿನಲ್ಲಿದ್ದ ಪತ್ನಿ ಸಂಧ್ಯಾ ಗೆ ಕಾಲು ಮುರಿದಿದ್ದು ಅಕ್ಕ ಅನಿತಾ ಕೈಗೆ ಪೆಟ್ಟು ಬಿದ್ದಿದೆ .

ಅಪಘಾತ ಸಮಯದಲ್ಲಿ ಕ್ಷೀಣವಾಗಿ ಉಸಿರಾಡುತ್ತಿದ್ದ ಮಲ್ಲಿಕಾರ್ಜುನ ಸ್ವಾಮಿಯು ಚಿಕ್ಕನಾಯಕನಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಮೃತದೇಹದ ಪೋಸ್ಟ್ಮಾರ್ಟಂ ಗೆ ಚಿಕ್ಕನಾಯಕನಹಳ್ಳಿ ಆಸ್ಪತ್ರೆಯ ಬಳಿ ಸಿದ್ಧತೆ ನಡೆದಿದೆ.

LEAVE A REPLY

Please enter your comment!
Please enter your name here