ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

0
187

ಹಾವೇರಿ/ಬ್ಯಾಡಗಿ-: ಬೊಲೆರೋ ವಾಹನ,ಕಾರು, ಮತ್ತು ಟ್ರಾಕ್ಟರ್ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ದುರ್ಮಣಕ್ಕಿಡಾದ ಘಟನೆ ತಾಲ್ಲೂಕಿನ ಮೋಟೆಬೆನ್ನೂರಿನ ಎನ್ ಎಚ್4 ನಲ್ಲಿ ಸಂಭವಿಸಿದೆ. ಕರೂರಿನಿಂದ ಹಾವೇರಿ ಕಡೆಗೆ ಟ್ರಾಕ್ಟರ್ ನಲ್ಲಿ ಪಾಟಿಗಲ್ಲು ಸಾಗಿಸುವಾಗ ಹಿಂದಿನಿಂದ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪಕ್ಕದಲ್ಲೇ ಚಲಿಸುತ್ತಿದ್ದ ಕಾರು ಅಪಘಾತಕ್ಕಿಡಾಗಿದೆ. ನಾಗಪ್ಪ ಬಣಕಾರ(50) ವೀರಪ್ಪ(35)ಮೃತ ದುರ್ದೈವಿಗಳು ಎಂದು ತಿಳಿದುಬಂದಿದ್ದು ಪ್ರಕರಣ ದಾಖಲಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here