ರಸ್ತೆ ಅಪಘಾತ ಸೈಕಲ್ ಸವಾರ ಸ್ಥಳದಲ್ಲೇ ಸಾವು

0
143

ಚಾಮರಾಜನಗರ/ಕೊಳ್ಳೇಗಾಲ: ಸೈಕಲ್ ಸವಾರನಿಗೆ ಕ್ರೈನ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಗರದ ಸಂತೆಬೀದಿ ಬಳಿಯ ಮೈಸೂರು ಮುಖ್ಯ ರಸ್ತೆ ಯಲ್ಲಿ ಸಂಭವಿಸಿದೆ. ಪಟ್ಟಣದ ಬೆಂಡರ ಹಳ್ಳಿಯ ಕೂಲಿ ಕಾರ್ಮಿಕ ನಾಗೇಶ್ (36) ಎಂದಿನಂತೆ ಕೆಲಸ ಮುಗಿಸಿಕೊಂಡು ಸೈಕಲ್‌ನಲ್ಲಿ ಪಟ್ಟಣದ ಕಡೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಕ್ರೈನ್ ಸೈಕಲ್‌ಗೆ ಡಿಕ್ಕಿ ಹೊಡೆದು ಸೈಕಲ್ ಸವಾರ ನಾಗೇಶ್ ಮೈ ಮೇಲೆ ಹರಿದಿದೆ. ಇದರಿಂದಾಗಿ ಮೃತನ ಸೊಂಟ ಹಾಗೂ ಕಾಲುಗಳು ಜಖಂಗೊಡಿವೆ. ಅಲ್ಲದೇ ತಲೆಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಕ್ರೈನ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ವೈ. ಅಮರ ನಾರಾಯಣ ಪ್ರಕರಣ ದಾಖಲಿಸಿ ಕೊಂಡು ಕ್ರೈನ್ ನ್ನು ವಶ ಪಡೆಸಿ ಕೊಂಡಿದ್ದಾರೆ.

LEAVE A REPLY

Please enter your comment!
Please enter your name here